

ತಲ್ಲೂರ: ಗ್ರಾಮೀಣ ಕೂಲಿಕಾರರು ದುಡಿಮೆ ಅರಸಿ ಬೇರೆಡೆಗೆ ಹೋಗುವುದನ್ನು ತಡೆಯಲು ಗ್ರಾಪಂನಿಂದ ನರೇಗಾ ಯೋಜನೆಯಡಿ ಕೆಲಸ ಸಿಗಲಿದೆ ಎಂದು ಪಿಡಿಒ ರಾವೇಂದ್ರಕುಮಾರ ಹೇಳಿದರು. ಇಲ್ಲಿನ ಗ್ರಾಪಂ ಸಭಾಭವನದಲ್ಲಿ ಈಚೆಗೆ ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ, ತಾಪಂ ಹಾಗೂ ಗ್ರಾಪಂ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ತ್ರೀ ಚೇತನ, ಮಹಿಳಾ ಭಾಗವಹಿಸುವಿಕೆ ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ನರೇಗಾದಲ್ಲಿ ಮಹಿಳಾ ಕೂಲಿಕಾರರಿಗೆ ಆದ್ಯತೆ ನೀಡಲಾಗುವುದು. ಕೂಲಿಕಾರರ ಮಕ್ಕಳಿಗೆ ಕೂಸಿನ ಮನೆ ಸೌಲಭ್ಯವಿದ್ದು ಬಳಸಿಕೊಳ್ಳಬೇಕು ಎಂದರು.
ಕಾರ್ಯದರ್ಶಿ ಸತೀಶ ಬಡಿಗೇರ ಮಾತನಾಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗತಿ ಜಾಥಾ ಜರುಗಿತು. ಉಮೇಶ ಗೋರವನಕೊಳ್ಳ, ವಿಜಯಲಕ್ಷಿ$್ಮ ಬಾರ್ಕಿ, ಧರ್ಮರಾಜ ಚಿಕಾಕಿ, ಸತ್ಯವ್ವ ಉಳ್ಳಾಗಡ್ಡಿ, ಪಾರ್ವತಿ ಕಲ್ಲನ್ನವರ, ಮಾಬೂಬಿ ಬಾಗವಾನ್, ದಾಾಯಣಿ ದುಂಡನಕೊಪ್ಪ, ಪ್ರೇಮಾ ಮಾಳಗಿ, ಗಿರಿಜಾ ಬೆನಕಟ್ಟಿ, ಸುಜಾತಾ ಕಾಶಪ್ಪನವರ, ಹುಸೇನಬಿ ಕುದರಿ, ರಾಜಶೇಖರ ಅಣ್ಣಿಗೇರಿ, ವಿಠ್ಠಲ ಬಡಿಗೇರ, ಮಹೇಶ ಇಟ್ನಾಳ ಇತರರಿದ್ದರು.