ಲವ್​ ಮಾಡಲ್ಲ ಅಂದಿದ್ದಕ್ಕೆ ಕಪಾಳಕ್ಕೆ ಬಾರಿಸಿದ ಮ್ಯಾನೇಜರ್​; ಹೊಡೆದ ರಭಸಕ್ಕೆ ದಿಢೀರ್ ಬಿದ್ದ ಯುವತಿ..

Manager 1
Published on

ಬೆಂಗಳೂರು: ತನ್ನನ್ನು ಆಕೆ ಪ್ರೀತಿಸುತ್ತಿಲ್ಲ ಎಂಬ ಕಾರಣಕ್ಕೆ ಸಿಟ್ಟಾದ ಯುವಕನೊಬ್ಬ ಆಕೆಯ ಕಪಾಳಕ್ಕೆ ಬಾರಿಸಿದ್ದು, ಹೊಡೆತದ ರಭಸಕ್ಕೆ ಯುವತಿ ದಿಢೀರ್ ಎಂದು ನೆಲಕ್ಕೆ ಕುಸಿದಿದ್ದಾಳೆ. ಡೊಮಿನೊಸ್ ಪಿಜ್ಜಾ ಹಟ್​ನಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಆಶ್ರಮದ ರಸ್ತೆಯಲ್ಲಿರುವ ಡೊಮಿನೊಸ್​ ಪಿಜ್ಜಾ ಹಟ್​ನ ಮ್ಯಾನೇಜರ್​, ಅಲ್ಲಿಯೇ ಕೆಲಸದಲ್ಲಿರುವ ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಆಕೆ ಬೇರೆ ಒಬ್ಬನನ್ನು ಪ್ರೀತಿಸುತ್ತಿದ್ದಳು.

ಆಕೆ ತನ್ನನ್ನು ಪ್ರೀತಿಸದೆ ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಸಿಟ್ಟಾದ ಮ್ಯಾನೇಜರ್​, ಕೆಲಸದ ಸ್ಥಳದಲ್ಲೇ ಆಕೆಗೆ ಹೊಡೆದು ರಂಪ ಮಾಡಿದ್ದಾನೆ. ಆತ ಹೊಡೆದ ರಭಸಕ್ಕೆ ಆಕೆ ಧೊಪ್ಪೆಂದು ಕೆಳಕ್ಕೆ ಬಿದ್ದಿದ್ದಾಳೆ. ಹೊಡೆತ ತಿಂದು ಆಕೆ ಬೀಳುವ ದೃಶ್ಯ ವಿಡಿಯೋ ಆಗಿದೆ. ಆದರೆ ಆಕೆ ಕೆಲಸ ಹೋಗುತ್ತದೆ ಎಂಬ ಭಯಕ್ಕೆ ಪೊಲೀಸರಿಗೆ ದೂರು ಕೊಟ್ಟಿಲ್ಲ ಎಂಬುದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net