ಹೂವು ಕೀಳಲು ಹೋದ ವ್ಯಾಪಾರಿಯ ಸಾವು; ತಡವಾಗಿ ತಿಳಿದ ಸುಳಿವು..

Lake
ಘಟನೆ ಸಂಭವಿಸಿದ ಕೆರೆ ಬಳಿ ಜಮಾಯಿಸಿದ ಜನಸ್ತೋಮ
Published on

ಬೆಂಗಳೂರು ಗ್ರಾಮಾಂತರ: ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಲಕ್ಷ್ಮಿಯ ಪ್ರೀತಿಪಾತ್ರ ತಾವರೆ ಹೂ ಕೀಳಲು ಹೋದ ವ್ಯಾಪಾರಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ದೊಡ್ಡಬಳ್ಳಾಪುರ ತಾಲೂಕು ಕೊನಘಟ್ಟದಲ್ಲಿ ನಡೆದಿದೆ.

ವರಮಹಾಲಕ್ಷ್ಮಿ ಹಬ್ಬದಂದು ತಾವರೆ ಹೂವಿಗೆ ಬೇಡಿಕೆ ಹೆಚ್ಚಿರುವುದರಿಂದ ಹೂವು ಕಿತ್ತು ವ್ಯಾಪಾರ ಮಾಡುವ ಆಸೆಯಿಂದ ಶುಕ್ರವಾರ ಮುಂಜಾನೆ ಕೊನಘಟ್ಟದ ಕೆರೆಯಲ್ಲಿ ತಾವರೆ ಹೂ ಕೀಳಲು ಹೋಗಿದ್ದ 60 ವರ್ಷದ ಕೃಷ್ಣಪ್ಪ ಸಾವಿಗೀಡಾಗಿದ್ದಾರೆ.

ಕೆರೆದಡದಲ್ಲಿ ಬಟ್ಟೆಗಳು: ಸಂಜೆ ವೇಳೆ ಕೆರೆ ದಡದಲ್ಲಿ ಬಟ್ಟೆಗಳಿದ್ದದ್ದನ್ನು ಗಮನಿಸಿ ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕೃಷ್ಣಪ್ಪ ಅವರ ಮೃತದೇಹ ಹೊರತೆಗೆದಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ದಿನ ತಾವರೆ ಹೂವು ಕಿತ್ತು ವ್ಯಾಪಾರ ಮಾಡುವ ಕನಸು ಕಂಡಿದ್ದ ಕೃಷ್ಣಪ್ಪ ಅದೇ ತಾವರೆ ಹೂವುಗಳ ಬುಡದಲ್ಲೇ ಉಸಿರುಚೆಲ್ಲಿದ್ದು ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಶೋಕದ ವಾತಾವರಣ ಮೂಡಿಸಿದೆ.

ದೊಡ್ಡಬಳ್ಳಾಪುರ ತಾಲೂಕು ಕೊನಘಟ್ಟ ಕೆರೆಯಲ್ಲಿ ಮೃತದೇಹವನ್ನು ಹೊರತೆಗೆಯುತ್ತಿರುವುದು.
ದೊಡ್ಡಬಳ್ಳಾಪುರ ತಾಲೂಕು ಕೊನಘಟ್ಟ ಕೆರೆಯಲ್ಲಿ ಮೃತದೇಹವನ್ನು ಹೊರತೆಗೆಯುತ್ತಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net