ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

7 KKP 1
Published on

ಕನಕಪುರ : ಅಕ್ರಮವಾಗಿ ಗಾಂಜ ಮಾರಾಟ ಮಾಡಲು ತೆರಳುತ್ತಿದ್ದ ವ್ಯಕ್ತಿಯನ್ನು ನಗರ ಪೋಲೀಸರು ಬಂಧಿಸಿದ್ದಾರೆ.

ಕೊಳ್ಳೇಗಾಲ ತಾಲೂಕು, ರಾಮಾಪುರ ಹೋಬಳಿ ಚಂಗಡಿ ಗ್ರಾಮದ  ವೀರಮಾದು ಅಲಿಯಾಸ್ ರಾಮಯ್ಯ (28) ಬಂಧಿತ ವ್ಯಕ್ತಿ.  75 ಸಾವಿರ ರೂ ಮೌಲ್ಯದ 3 ಕೆ.ಜಿ 200 ಗ್ರಾಂ ತೂಕದ ಗಾಂಜಾ ಸೋಪ್ಪನ್ನು ವಶಪಡಿಸಿಕೊಂಡು ಎನ್.ಡಿ.ಪಿ.ಎಸ್ ಆಕ್ಟ್‌ನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾರ್ಚ್ 6 ರಂದು ಕಾಲೇಜ್ ಬ್ಯಾಗ್ ಒಂದರಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ತೆರಳುತ್ತಿದ್ದಾನೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು,  ಆರೋಪಿಯನ್ನು ನಗರದ ಹೌಸಿಂಗ್ ಬೋರ್ಡ್ ಬಳಿ ಬಂಧಿಸಿದ್ದಾರೆ.

ಸರ್ಕಲ್ ಇನ್ಸ್‌ಪೆಕ್ಟರ್ ಮಿಥುನ್  ಶಿಲ್ಪಿ, ಎಸ್.ಐ ಗಳಾದ ಉಷಾನಂದಿನಿ, ರತ್ನಮ್ಮ, ಪೋಲೀಸ್ ಪೇದೆಗಳಾದ ಶಿವಶಂಕರ್, ಮನು, ರವಿ, ವಿಶ್ವಾಸ್, ರಮೇಶ್, ಲೋಹಿತ್, ತ್ರೀವೇಣ್, ಮೋನಿಶಾ ಹಾಗೂ ಚಾಲಕ ಶಂಕರ್ ಲಿಂಗಯ್ಯ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ ನಗರ ಪೋಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net