ವಿಚ್ಛೇದಿತೆ ಜತೆ 4 ವರ್ಷ ಲಿವಿಂಗ್ ಟುಗೆದರ್ ಇದ್ದು, ಮೂರನೇ ಮದ್ವೆ ಮಾಡ್ಕೊಂಡ ಭೂಪ!

Siddesh
Published on

ನೆಲಮಂಗಲ: ವಿಚ್ಛೇದಿತೆ ಜತೆ ನಾಲ್ಕು ವರ್ಷ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಬಳಿಕ ಮೂರನೇ ಮದುವೆಯಾಗಿ, ಕೊನೆಗೂ ಮತ್ತೊಂದು ಮಾವನ ಮನೆ ಸೇರಿದ್ದಾನೆ. ಅರ್ಥಾತ್, ಪೊಲೀಸರಿಂದ ಬಂಧಿಸಲ್ಪಟ್ಟು ಜೈಲುಪಾಲಾಗಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ಈ ಘಟನೆ ನಡೆದಿದ್ದು, ಸಿದ್ದೇಶ್​ (33) ಎಂಬಾತನೇ ಆರೋಪಿ. ವಿಚ್ಛೇದಿತೆ ನೀಡಿದ ದೂರಿನ ಮೇರೆಗೆ ದಾಬಸ್​ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಎರಡು ಮದುವೆಯಾಗಿದ್ದ ಆರೋಪಿ ಸಿದ್ದೇಶ್​ 12 ವರ್ಷಗಳ ಹಿಂದೆ ವಿಚ್ಛೇದನಕ್ಕೊಳಗಾಗಿದ್ದ ಮಹಿಳೆ ಜತೆ ನಾಲ್ಕು ವರ್ಷಗಳಿಂದ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದ ಹಾಗೂ ಆಕೆಯನ್ನೇ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಅದಾಗ್ಯೂ ಬಳಿಕ ಮೂರನೇ ಮದುವೆ ಕೂಡ ಮಾಡಿಕೊಂಡಿದ್ದ.

ನಂತರ ಮೂರನೇ ಹೆಂಡತಿಗೆ ಕೈಕೊಟ್ಟು ಪುನಃ ವಿಚ್ಛೇದಿತೆಯ ಸಂಗಕ್ಕೆ ಹಾತೊರೆದಿದ್ದ. ವಿಚ್ಛೇದಿತೆ ಈತನ ವಿರುದ್ಧ ವಂಚನೆ ಹಾಗೂ ದೈಹಿಕ ಹಿಂಸೆ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದು, ಆ ಪ್ರಕಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net