ದ್ವಿಚಕ್ರ ವಾಹನಕ್ಕೆ ನಾಯಿಯನ್ನು ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದ ವ್ಯಕ್ತಿ; ಅಮಾನವೀಯ ವಿಡಿಯೋ ವೈರಲ್​

Udupi Dog
Published on

ಉಡುಪಿ: ಅಮಾನವೀಯ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ಸತ್ತ ನಾಯಿಯ ಕೊರಳಿಗೆ ಚೈನ್​ ಬಿಗಿದು ದ್ವಿಚಕ್ರ ವಾಹನಕ್ಕೆ ಕಟ್ಟಿ  ರಸ್ತೆಯುದ್ದಕ್ಕೂ ಎಳೆದೊಯ್ದಿರುವ ಹೃದಯ ವಿದ್ರಾವಕ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಜಿಲ್ಲೆಯ ಕಾಪುವಿನ ಕೊಂಬಗುಡ್ಡೆಯ ನಿವಾಸಿ ಖಾದರ್ ಎಂಬ ವ್ಯಕ್ತಿಯು ಸತ್ತ ನಾಯಿಯ ಕೊರಳಿಗೆ ಚೈನ್​ ಬಿಗಿದು ದ್ವಿಚಕ್ರ ವಾಹನಕ್ಕೆ ಕಟ್ಟಿ  ರಸ್ತೆಯುದ್ದಕ್ಕೂ ಎಳೆದೊಯ್ದಿರುವ ವ್ಯಕ್ತಿ. ಕೊಂಬಗುಡ್ಡೆಯಿಂದ ಶಿರ್ವ ಪೇಟೆಯವರೆಗೆ ಸುಮಾರು 5 ಕಿ.ಮೀ ದೂರದವರೆಗೆ ಎಳೆದುಕೊಂಡು ಹೋಗಿದ್ದಾನೆ. ಆದರೆ ಆ ವ್ಯಕ್ತಿ ಹೀಗ್ಯಾಕೆ ಮಾಡಿದಾ ಎಂಬುದುಬ ಈವರೆಗೆ ಅರ್ಥವಾಗಿಲ್ಲ.

ಆ ಶ್ವಾನ ಸತ್ತಿದ್ದು ಹೇಗೆ ಅದು ತಾನೇ ಸಾಕಿದ ಅಥವಾ ಬೀದಿ ನಾಯಿನಾ ಎಂಬುದು ಈವರೆಗೆ ತಿಳಿದು ಬಂದಿಲ್ಲ. ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶಿರ್ವ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net