ಮೊಮ್ಮಗುವನ್ನು ನೋಡಲು ಬಂದ ಅತ್ತೆಗೇ ಚಾಕು ಇರಿದ!

Stab
Published on

ಉತ್ತರಕನ್ನಡ: ಕೌಟುಂಬಿಕ ಕಲಹ ಯಾವ್ಯಾವ ಹಂತಕ್ಕೆ ತಲುಪುತ್ತದೆ ಎಂಬುದಕ್ಕೆ ಇದೂ ಒಂದು ನಿದರ್ಶನ. ಮೊಮ್ಮಗುವನ್ನು ನೋಡಲೆಂದು ಬಂದ ಅತ್ತೆಗೆ ಅಳಿಯ ಚಾಕು ಚುಚ್ಚಿದ ಪ್ರಕರಣವೊಂದು ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ದಾಂಡೇಲಿ ಮೂಲದ ರಮಜಾನ್ (25) ಎಂಬಾತ ತನ್ನ ಅತ್ತೆ ಕದ್ರಾ ಎಂಬಲ್ಲಿನ ಮಹಮ್ಮದಬೀ ಎಂಬಾಕೆಯ ಹೊಟ್ಟೆಗೆ ಚಾಕು ಚುಚ್ಚಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿದೆ.

ಮಹಮ್ಮದಬೀ ತನ್ನ ಮಗಳ ಮಗುವನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾಗ, ನನ್ನ ಮಗುವನ್ನ ನೋಡು ನೀವು ಯಾಕೆ ಬಂದಿದ್ದೀರಿ? ಎಂದು ತಕರಾರು ತೆಗೆದ ರಮಜಾನ್​ ಅತ್ತೆಯ ಮೇಲೆ ಹಲ್ಲೆ ಮಾಡಿದ್ದ. ಅಲ್ಲದೆ ಮದ್ಯದ ಅಮಲಿನಲ್ಲಿ ಆಕೆಯ ಹೊಟ್ಟೆಗೆ ಚಾಕುವನ್ನು ಚುಚ್ಚಿದ್ದ. ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net