ಬಿಡದಿ: ಗಾಂಜಾ ಮಾರುತ್ತಿದ್ದವನನ್ನು ಮಂಗಳವಾರ ಬಿಡದಿ ಪೊಲೀಸರು ಬಂಧಿಸಿ ಆತನಿಂದ 1 ಕೆಜಿ 140 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕೇತುಗಾನಹಳ್ಳಿ ನಿವಾಸಿ ಇಸ್ಮಾಯಿಲ್(32) ಬಂಧಿತ. ಬೆಂಗಳೂರು&ಮೈಸೂರು ಹೆದ್ದಾರಿಯ ಅವರಗೆರೆ ಬ್ರಿಡ್ಜ್ ಬಳಿ ಸಾರ್ವಜನಿಕವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗ ಬಿಡದಿ ಪೊಲೀಸ್ ಠಾಣೆ ಪಿಎಸ್ಐ ನರಸಿಂಹಮೂರ್ತಿ ಹಾಗೂ ಸಿಬ್ಬಂದಿ ದಾಳಿ ಮಾಡಿ, ಬಂಧಿಸಿದ್ದಾರೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.