ಗಾಂಜಾ ಮಾರುತ್ತಿದ್ದವನ ಬಂಧನ

Crime Logo
Published on

ಹಾವೇರಿ: ಗಾಂಜಾ ಮಾರುತ್ತಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು ಆತನಿಂದ 18 ಸಾವಿರ ರೂ. ಮೌಲ್ಯದ 946 ಗ್ರಾಂ. ಗಾಂಜಾ ವಶಪಡಿಸಿಕೊಂಡ ಘಟನೆ ಅಕ್ಕಿಆಲೂರ ಸಮೀಪದ ಬಾಳೂರು ಕ್ರಾಸ್ ಬಳಿ ಶುಕ್ರವಾರ ನಡೆದಿದೆ.

ಅಕ್ಕಿಆಲೂರ ಇಮಾಮನಗರದ ಸಮೀರ ಅಹ್ಮದ್ ರಿಯಾಜಅಹ್ಮದ್ ಮಲ್ಲಿಗಾರ (24) ಬಂಧಿತ. ಈತನಿಂದ 18 ಸಾವಿರ ರೂ. ಮೌಲ್ಯದ 946 ಗ್ರಾಂ. ಗಾಂಜಾ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಈತ ಬಾಳೂರು ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸೈಬರ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಐ ಶಿವಶಂಕರ ಗಣಾಚಾರಿ, ಪಿಎಸ್​ಐ ಎಂ.ಎಫ್. ದುರ್ಗಪ್ಪನವರ, ಸಿಬ್ಬಂದಿ ಎಚ್.ಎಂ. ಗಾಜಿಗೌಡ್ರ, ಡಿ.ಎಸ್. ಬಿಲ್ಲರ, ಮಹೇಶ ಹೊರಕೇರಿ, ಆನಂದ ದೊಡ್ಡಕುರುಬರ, ಪರಶುರಾಮ ಲಮಾಣಿ, ಇತರರು ಕಾರ್ಯåಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net