ನಶೆಯಲ್ಲಿ ಮೊಸಳೆ ಹಿಡಿಯಲು ಕೆರೆಗೆ ಜಿಗಿದ ಭೂಪ: ಮುಂದೇನಾಯ್ತು?

bk
ಕುಡಿದ ನಶೆಯಲ್ಲಿ ಭೂಪನೊಬ್ಬ ಮೊಸಳೆ ಹಿಡಿಯಲು ಕೆರೆಗೆ ಜಿಗಿದ ಘಟನೆ
Published on

ಬಾಗಲಕೋಟೆ: ಕುಡಿದ ನಶೆಯಲ್ಲಿ ಭೂಪನೊಬ್ಬ ಮೊಸಳೆ ಹಿಡಿಯಲು ಕೆರೆಗೆ ಜಿಗಿದ ಘಟನೆ ತಾಲೂಕಿನ ಮುರನಾಳ ಪುನರ್ ವಸತಿ ಕೇಂದ್ರದಲ್ಲಿ ನಡೆದಿದೆ.

ಮುರನಾಳ ಗ್ರಾಮದ ಕೆರೆಯಲ್ಲಿ ಗುರುವಾರ ಮೊಸಳೆ ಕಂಡು ಬಂದಿತ್ತು. ಇದೇ ಗ್ರಾಮದ ಮೌಲಾಸಾಬ ವಾಲೀಕಾರ ಎನ್ನುವ ವ್ಯಕ್ತಿ ಕುಡಿದ ನಶೆಯಲ್ಲಿ ಮೊಸಳೆ‌ ಹಿಡಿಯಲು ಕೆರೆಗೆ ಜಿಗಿದು ದುಸ್ಸಾಹಸ ಮಾಡಿದ್ದಾನೆ. ನಂತರ ಈಜು ಬರಲಾಗದೆ ನೀರಿನಲ್ಲಿ ಮುಳಗುತ್ತಿದ್ದ ಕೊನೆಗೆ ಈಜುಗಾರನೊಬ್ಬ ಆತನನ್ನು ರಕ್ಷಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net