ಚಿಕ್ಕಪ್ಪನ ಮಗಳ ಮೇಲೇ ಅತ್ಯಾಚಾರ ನಡೆಸಿದ!; ಅಪ್ರಾಪ್ತ ವಯಸ್ಸಿನ ಬಾಲಕಿಗೆ ಆತಂಕಕಾರಿಯಾಗಿದ್ದ ಸೋದರ...

rape
Published on

ದಾವಣಗೆರೆ: ಚಿಕ್ಕಪ್ಪನ ಮಗಳ ಮೇಲೇ ಅತ್ಯಾಚಾರ ನಡೆಸುತ್ತಿದ್ದ ಸೋದರನ ಕಾಮುಕತನ ಕೊನೆಗೂ ಬಹಿರಂಗಗೊಂಡಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣದ ದಾಖಲಿಸಿಕೊಂಡಿದ್ದಾರೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸಂತೋಷ್​ (33) ಆರೋಪಿ. ಈತ ತನ್ನ ಚಿಕ್ಕಪ್ಪನ ಮಗಳು, ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಮಧ್ಯರಾತ್ರಿ ವೇಳೆ ಮನೆಯಲ್ಲಿ ಅತ್ಯಾಚಾರ ನಡೆಸುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಂತ್ರಸ್ತೆಯನ್ನು ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ವಿಷಯ ಬೆಳಕಿಗೆ ಬಂದಿದ್ದು, ಪಾಲಕರು ಆರೋಪಿ ವಿರುದ್ಧ ದೂರು ನೀಡಿದ್ದರು. ಹೊನ್ನಾಳಿ ಠಾಣೆ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net