ಕನಕಪುರ: ಶಬರಿಮಲೆಗೆ ತೆರಳಿದ್ದ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಯೊಬ್ಬರು ಕಟ್ಟಡದ ಮೇಲ್ಚಾವಣಿ ಇಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೇರಳದ ಭಸ್ಮಾಕುಲಂ ರಸ್ತೆ ಮಲ್ಲಿಕಾಪುರಂನಲ್ಲಿ ಸಂಭವಿಸಿದೆ
ಕನಕಪುರ ನಗರದ ಮದ್ದೂರಮ್ಮ ಬೀದಿ ಬಾಡಿಗೆ ಮನೆಯ ನಿವಾಸಿ ಕುಮಾರ್ ಅಲಿಯಾಸ್ ಕುಂಬಿ (40) ಮೃತಪಟ್ಟ ಭಕ್ತನಾಗಿದ್ದಾನೆ.
ನಗರದಿಂದ ಶನಿವಾರ ಸಂಜೆ 5 ಮಂದಿ ಇರುಮುಡಿ ಕಟ್ಟಿಕೊಂಡು ಸ್ಕಾರ್ಪಿಯೋ ಕಾರಿನಲ್ಲಿ ತೆರಳಿದರು. ಸೋಮವಾರ ಮಧ್ಯಾಹ್ನ ಪತ್ನಿ ಮಹಾಲಕ್ಷ್ಮಿಯೊಂದಿಗೆ ಬೆಟ್ಟ ಹತ್ತುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಂಜೆ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆಂದು ನಮಗೆ ಮಾಹಿತಿ ಬಂದಿದೆ ಎಂದು ಮೃತನ ಪತ್ನಿ ತಿಳಿಸಿದ್ದಾರೆ. ಜಿಗಿದು ಕೆಳಗೆ ಬಿದ್ದ ವ್ಯಕ್ತಿಯನ್ನು ಕೂಡಲೇ ಕೊಟ್ಟಾಯ0 ಆಸ್ಪತ್ರೆಗೆ ದಾಖಲಿಸಲಾಗಿದೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಜೊತೆಯಲ್ಲಿದ್ದ ಸ್ನೇಹಿತ ಕೃಷ್ಣ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ.
ಪತ್ನಿ ಮಹಾಲಕ್ಷ್ಮಿ ಮಾತನಾಡಿ ನಾಲ್ಕು ಮಂದಿ ಸ್ನೇಹಿತರು ಕರೆದುಕೊಂಡು ಹೋಗುವಾಗ ಚೆನ್ನಾಗಿದ್ದ ನನ್ನ ಪತಿ ಏಕಾಏಕಿ ಈ ರೀತಿಯಾಗಿರುವುದಕ್ಕೆ ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಮೃತನು ಪತ್ನಿ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ