

ಮಾಗಡಿ: ಜಮೀನ ರಸ್ತೆ ಬಿಡುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ
ಮಕ್ಕಳು ಮಹಿಳೆ ಮೇಲೆ ಟ್ರಾಕ್ಟರ್ ಹರಿಸಿ ಗಾಯಾಗೊಳಿಸಿರುವ ಘಟನೆ ನಡೆದಿದೆ ಮಾಗಡಿಯಲ್ಲಿ ನಡೆದಿದೆ
ತಾಲೋಕಿನ ಚಿಕ್ಕಕಲ್ಯ ಗ್ರಾಮದ ಹುಚ್ಚನ ಬಾವಿ ಗ್ರಾಮದ ಶಿವಮೂರ್ತಿ. ಟ್ಯಾಕ್ಟರ್ ಹರಿಸಿ ಗಾಯಗೊಳಿಸಿದ ವ್ಯಕ್ತಿಯಾಗಿದ್ದಾನೆ.
ರಸ್ತೆ ಬಿಡುವ ವಿಚಾರವಾಗಿ ಕಳೆದ ಮೂರು ನಾಲ್ಕು ತಿಂಗಳಿಂದ ನಿರಂತರವಾಗಿ ಗಲಾಟೆ ನಡೆಯುತ್ತಿದ್ದು ಈ ವೇಳೆ ಗ್ರಾಮದ ಹಿರಿಯ ಮುಖಂಡರು ಸಮಾಧಾನಪಡಿಸುತ್ತಿದ್ದರು ಅದರೆ ಭಾನುವಾರ ಉಗ್ರರೂಪಕ್ಕೆ ಗಲಾಟೆ ನಡೆದು ಮನೆಯಲ್ಲಿದ್ದ ನಾಗರಾಜು ಎನ್ನುವರ ಪತ್ನಿ ಕಲಾವತಿ, ಪುತ್ರಿಲಿಷಿತಾ (4), ಪುತ್ರ ಪ್ರಣಿತ್ ಗೌಡ (6),ಎಂಬುವರನ್ನು ಮನೆಯಿಂದ ಹೊರಗೆಳೆದುಕೊಂಡು ಬಂದು ಮಕ್ಕಳ ಕಾಲು, ಹೊಟ್ಟೆ ಭಾಗಕ್ಕೆ ಟ್ಯಾಕ್ಟರ್ ಹತ್ತಿಸಿ ಪೌರುಷ ಮೆರೆದಿದ್ದಾನೆ.
ನಾಗರಾಜು ಎಂಬುವವರ ಇಬ್ಬರು ಮಕ್ಕಳು.ಪತ್ನಿ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
ಕುದೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆ ನಡೆಯುತ್ತಿದಂತೆ ಟ್ಯಾಕ್ಟರ್ ಸಮೇತ ಕಾಲ್ಕಿತಿದ್ದಾನೆ.