ಹೊಟ್ಟೆನೋವಿಗೆ ಪ್ರಾಣಬಲಿ; ಬೇನೆ ತಾಳಲಾಗದೆ ನೇಣಿಗೆ ಶರಣಾದ ವ್ಯಕ್ತಿ

death
ಸಾಂದರ್ಭಿಕ ಚಿತ್ರ
Published on

ದಾವಣಗೆರೆ: ತೀವ್ರ ಅನಾರೋಗ್ಯದಿಂದ ಬಳಲಿ ಬೇಸತ್ತು ಸಾವಿಗೆ ಶರಣಾದವರ ಸಂಖ್ಯೆ ಬಹಳಷ್ಟಿದೆ. ಅಂಥ ಸಾವುಗಳ ಪಟ್ಟಿಗೆ ಹೊಸದೊಂದು ಸೇರ್ಪಡೆಯಾಗಿದೆ. ನೋವಿನ ಸಂಕಟ ತಾಳಲಾರದೆ ಯುವಕನೊಬ್ಬ ನೇಣಿನ ಮೊರೆ ಹೋಗಿದ್ದಾನೆ.

ದಾವಣಗೆರೆ ಜಿಲ್ಲೆ ಹರಿಹರದ ಪರಿಶಿಷ್ಟ ವರ್ಗದ ಕಾಲನಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಹರಿಹರದ ನಿವಾಸಿ ಎಂ.ಗಣೇಶ್ (24) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.

ಗಣೇಶ್ ಬಹಳ ಸಮಯದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ. ಸಾಕಷ್ಟು ಔಷಧ-ಚಿಕಿತ್ಸೆ ಪಡೆದಿದ್ದರೂ ಉಪಶಮನ ಆಗಿರಲಿಲ್ಲ. ಇದರಿಂದ ಮಾನಸಿಕವಾಗಿ ತೀವ್ರ ನೊಂದಿದ್ದ ಗಣೇಶ್​, ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಫ್ಯಾನ್​ಗೆ ನೇಣು ಹಾಕಿಕೊಂಡಿದ್ದಾನೆ. ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net