ಪತ್ನಿ ಬಿಟ್ಟು ಹೋದಳೆಂದು ಮಕ್ಕಳಿಬ್ಬರಿಗೆ ವಿಷವುಣಿಸಿ ಆತ್ಮಹತ್ಯೆ ಶರಣಾದ ವ್ಯಕ್ತಿ

Death
Published on

ಚಿಕ್ಕೋಡಿ: ಪತ್ನಿ ಬಿಟ್ಟು ಹೋದಳು ಎಂದು ಎಳೆ ಕಂದಮ್ಮಗಳಿಗೆ ತಂದೆ ವಿಷ ಉಣಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗೂಡ ಗ್ರಾಮದಲ್ಲಿ ನಡೆದಿದೆ.

ತಂದೆ ತಮ್ಮಣ್ಣಾ ಗಿಡ್ಡಾಳೆ(38) ಮಕ್ಕಳಾದ ಚಿನ್ನು ಗಿಡ್ಡಾಳೆ (2) ಹಾಗೂ ನಿರಂಜನ್​ ಗಿಡ್ಡಾಳೆ (10) ಮೃತರು. ಇಬ್ಬರು ಮಕ್ಕಳೊಂದಿಗೆ ನನ್ನನ್ನು ಬಿಟ್ಟು ಹೋದಳಲ್ಲ ಎಂಬ ಬೇಸರದಿಂದ ತಮ್ಮಣ್ಣಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಷ ಉಣಿಸಿ ಅಕ್ಕ-ಪಕ್ಕದಲ್ಲೆ ಮಕ್ಕಳನ್ನು ಮಲಸಿಕೊಂಡು ತಂದೆ ಪ್ರಾಣ ಬಿಟ್ಟಿರುವುದು ಹೃದಯವಿದ್ರಾವಕವಾಗಿದೆ. ಬಾಳಿ ಬದುಕದ ಕಂದಮ್ಮಗಳು ಜಗತ್ತಿನ ವಾಸ್ತವ ಅರಿಯುವ ಮುನ್ನವೇ ಇಹಲೋಕ ತ್ಯಜಿಸಿದ್ದನ್ನು ನೋಡಿ ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಹುಕ್ಕೇರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net