ಗಾಂಜಾ ಸಾಗಿಸುತ್ತಿದ್ದವನ ಬಂಧನ

Published on

ಉತ್ತರಪ್ರದೇಶದ ಮಿರ್ಜಾಪೂರ್​ ಜಿಲ್ಲೆಯ ಮರಿಹನ್​ ತಹಶಿಲ್​ ದೇವಪುರಂ ಮೂಲದವನ ಸೆರೆ

ಗೌರಿಬಿದನೂರು: ನಗರದ ವಿದುರಾಶ್ವತ್ಥದ ರೈಲ್ವೆ ನಿಲ್ದಾಣದ ಬಳಿ ಗಾಂಜಾ ಸಾಗಿಸುತ್ತಿದ್ದವನನ್ನು ಗುರುವಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ, 8 ಕೆಜಿ 435 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಉತ್ತರಪ್ರದೇಶದ ಮಿರ್ಜಾಪೂರ್​ ಜಿಲ್ಲೆಯ ಮರಿಹನ್​ ತಹಶಿಲ್​ ದೇವಪುರಂನ ಷಫೀಮಹಮ್ಮದ್​(22) ಬಂಧಿತ. ವಶಕ್ಕೆ ಪಡೆದ ಗಾಂಜಾ ಬೆಲೆ 2.40 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಸದ್ಯಕ್ಕೆ ಷಫೀಮಹಮ್ಮದ್​ ಹಿಂದುಪುರ ತಾಲೂಕಿನ ಲೇಪಾಕ್ಷಿ ಗ್ರಾಮದಲ್ಲಿ ವಾಸವಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net