

ಕೊಳ್ಳೇಗಾಲ: ಪಟ್ಟಣದ ಕೆಎಸ್‌ಆರ್‌ಟಿಸಿ ಡಿಪೋ ಮುಂಭಾಗದ ರಸ್ತೆಯಲ್ಲಿ ಒಣಗಾಂಜಾ ಸಾಗಿಸುತ್ತಿದ್ದ ಯುವಕನನ್ನು ಪಟ್ಟಣದ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಯಳಂದೂರು ತಾಲೂಕಿನ ಮಂಚಾಪುರ ಗ್ರಾಮದ ಮನು(22) ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ ಮತ್ತು ತಂಡ ಆರೋಪಿಯನ್ನು ಮಾಲು ಸಮೇತ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.