ಗಾಂಜಾ ಮಾರುತ್ತಿದ್ದವನ ಬಂಧನ

Published on

ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಾಲು ಸಮೇತ ಬಾಗೇಪಲ್ಲಿ ಪೊಲೀಸರು ಬಂಧಿಸಿ, 2.5 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಸಾಯಿ ದೀಪಕ್​ ಬಂಧಿತ.

ಗೂಳೂರು ಬಳಿಯಲ್ಲಿ ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡು ಓಡಿಹೋಗಲು ಪ್ರಯತ್ನಿಸಿದ ಸಾಯಿ ದೀಪಕ್​ನನ್ನು ಸುತ್ತುವರಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಬ್ಯಾಗ್​ನಲ್ಲಿ 2.5 ಕೆಜಿ ಗಾಂಜಾ ಪತ್ತೆಯಾಗಿದೆ. ಯುವಕನನ್ನು ವಿಚಾರಣೆಗೆ ಒಳಪಡಿಸಿದಾಗ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅರಕುವ್ಯಾಲಿ ಗ್ರಾಮದಿಂದ ಕಳವು

ಮಾಡಿಕೊಂಡು ಬಂದು ಬಾಗೇಪಲ್ಲಿ, ಗೂಳೂರು ಕಡೆಗಳಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಜಗನ್ನಾಥ್​ ರೈ ಹಾಗೂ ಡಿವೈಎಸ್ಪಿ ಶಿವಕುಮಾರ್​, ಬಾಗೇಪಲ್ಲಿಯ ಪೊಲೀಸ್​ ಇನ್​ಸ್ಪೆಕ್ಟರ್​ ಪ್ರಶಾಂತ್​ ವರ್ಣಿ ನೇತೃತ್ವದಲ್ಲಿ ನಡೆದಿರುವ ಕಾರ್ಯಾಚರಣೆಯಲ್ಲಿ ಸಬ್​ ಇನ್​ಸ್ಪೆಕ್ಟರ್​ಗಳಾದ ಸುನೀಲ್​ ಕುಮಾರ್​, ಮುನಿರತ್ನಂ, ಸಿಬ್ಬಂದಿ ಸುರೇಶ್​, ಧನಂಜಯ ಕುಮಾರ್​, ಸಾಗರ್​, ವೆಂಕಟಶಿವ, ಕೃಷ್ಣಪ್ಪ, ಶಂಕರಪ್ಪ, ರಾಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net