ಶ್ರೀಗಂಧ ಮರ ಕತ್ತರಿಸಿದ್ದವನ ಬಂಧನ

CHANNA BASAVANNA
Published on

ಹನೂರು: ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ಧಾಮದ ಅಂಡೇಕುರುಬರದೊಡ್ಡಿ ಗಸ್ತಿನ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಶ್ರೀಗಂಧದ ಮರ ಕತ್ತರಿಸಿದ್ದವನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.

ತಾಲೂಕಿನ ಪಿ.ಜಿ. ಪಾಳ್ಯ ಸಮೀಪದ ಅಂಡೇಕುರುಬರ ದೊಡ್ಡಿಯ ಚನ್ನಬಸವಣ್ಣ (45) ಬಂಧಿತ ಆರೋಪಿ. ಇದೇ ಗ್ರಾಮದ ಜಡೇಯಪ್ಪ ಪರಾರಿಯಾದವ.ಈ ಇಬ್ಬರೂ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧದ ಮರವನ್ನು ಕತ್ತರಿಸಿ ತುಂಡರಿಸುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಸಿಬ್ಬಂದಿ ದಾಳಿ ನಡೆಸಿದಾಗ ಚನ್ನಬಸವಣ್ಣ ಸಿಕ್ಕಿ ಬಿದ್ದರೆ, ಜಡೇಯಪ್ಪ ಪರಾರಿಯಾಗಿದ್ದಾನೆ. ಸಿಬ್ಬಂದಿ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಪರಾರಿಯಾಗಿರುವ ಮತ್ತೊಬ್ಬನ ಬಂಧನಕ್ಕೆ ಸಿಬ್ಬಂದಿ ಬಲೆ ಬೀಸಿದ್ದಾರೆ.

ದಾಳಿಯಲ್ಲಿ ಫಾರೆಸ್ಟ್ ಗಾರ್ಡ್ ಮಲ್ಲೇಶ್, ಸಿಬ್ಬಂದಿ ವಿನಯ್‌ಕುಮಾರ್, ವೀರಣ್ಣ, ಪುಟ್ಟಶೆಟ್ಟಿ, ಮಹಾನಂದ ಹಾಗೂ ಜಡೇಯಪ್ಪ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net