

ಕಲಬುರಗಿ: ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಎಐಸಿಸಿ ಅಧ್ಯಕ್ಷರೂ ಆದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.
ಎನ್‌ವಿ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಗೃಹಜ್ಯೋತಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಶಾಲೆ ಮತ್ತು ಶಾಲಾ ಕೋಣೆಗಳ ಕೊರತೆ ಇದ್ದು, ಶಿಕ್ಷಕರ ಸಾವಿರಾರು ಹುದ್ದೆ ಖಾಲಿ ಇವೆ. ಹುದ್ದೆ ಭರ್ತಿ, ಮೂಲಸೌಲಭ್ಯ ಒದಗಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.
ಐದು ಗ್ಯಾರಂಟಿ ಸೇರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೊಮ್ಮೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ರೈತರು, ಬಡವರು, ಆರ್ಥಿಕವಾಗಿ ಹಿಂದುಳಿದವರು, ದಲಿತರು ಹೀಗೆ ಎಲ್ಲರಿಗೂ ಅನ್ವಯಿಸುವಂಥ ವಿನೂತನ ಯೋಜನೆ ಜಾರಿಗೆ ತರುವ ಮೂಲಕ ಜನಪರ ಕೆಲಸ ಮಾಡಿದೆ ಎಂದು ಹೇಳಿದರು.
ನುಡಿದಂತೆ ನಡೆವ ಸರ್ಕಾರ: ಹಿಂದಿನ ಬಿಜೆಪಿ ಸರ್ಕಾರಕ್ಕೆ ಹೇಳಿಕೊಳ್ಳುವಂಥ ಒಂದೂ ಯೋಜನೆ ಜಾರಿಗೆ ತರಲು ಆಗಲಿಲ್ಲ. ಆದರೆ ಕಾಂಗ್ರೆಸ್ ನುಡಿದಂತೆ ನಡೆದುಕೊಂಡಿದೆ. ಬೋಗಸ್ ಭರವಸೆ ನೀಡುವ ಸರ್ಕಾರ ನಮ್ಮದಲ್ಲ. ಪ್ರಧಾನಿಯವರು ದೇಶದ ೨ ಕೋಟಿ ಯುವಕರಿಗೆ ಉದ್ಯೋಗ, ಪ್ರತಿ ಕುಟುಂಬಕ್ಕೆ ೧೫ ಲಕ್ಷ ರೂ. ಕೊಡುವುದಾಗಿ ಹೇಳಿದ್ದರು. ಆದರೆ ಮಾಡಿz್ದೆÃನು ಎಂದು ಪ್ರಶ್ನಿಸಿದ ಖರ್ಗೆ, ೨೦೦೪ರ ಚುನಾವಣೆ ಪ್ರಚಾರ ವೇಳೆ ಇದೇ ಎನ್‌ವಿ ಮೈದಾನದಲ್ಲಿ ೩೭೧(ಜೆ) ಜಾರಿಗೆ ತರುವುದಾಗಿ ಭರವಸೆ ನೀಡಿದಂತೆ ಮಾಡಿ ತೋರಿಸಿz್ದÉÃವೆ. ಹೇಳಿದ್ದನ್ನು ಕಾಂಗ್ರೆಸ್ ಮಾಡುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದರು.
ಗ್ಯಾರಂಟಿಗೆ ಬಿಜೆಪಿ ಥಂಡಾ: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಬಗ್ಗೆ ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಯೋಜನೆಗಳ ಮೂಲಕ ಸರ್ಕಾರ ದಿವಾಳಿಯಾಗಲಿದೆ ಎಂದಿದ್ದರು. ಆದರೆ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುತ್ತಿದ್ದು, ಸರ್ಕಾರ ದಿವಾಳಿ ಆಯ್ತಾ? ಈ ಯೋಜನೆ ಕಂಡು ಬಿಜೆಪಿ ಥಂಡಾ ಹೊಡೆದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.