ಹಿಂದುಗಳಿಗೆ ಮಲ್ಲಿಕಾರ್ಜುನ ಖರ್ಗೆ ಅಪಮಾನ : ಜಗದೀಶ ಶೆಟ್ಟರ್

MP shettar
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕುಂಬಮೇಳ ಕುರಿತು ರಾಜ್ಯಸಭೆ ವಿಪಕ್ಷ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಗಿ ಮಾತನಾಡಿರುವುದು ಅವರ ಮನಸ್ಥಿತಿ, ಸಂಸ್ಕೃತಿ ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಖರ್ಗೆ ಹೇಳಿಕೆ ಹಿಂದೂ ಧರ್ಮಕ್ಕೆ ಮಾಡಿದ ಅಪಮಾನವಾಗಿದೆ. ಹಿಂದು ವಿರೋಧಿ ನೀತಿ ಅನುಸರಿಸಿಕೊಂಡು ಬರುತ್ತಿದ್ದಾರೆ. ಹೊರತು ಅವರಿಗೆ ಈ ನೆಲದ ಸಂಸ್ಕೃತಿ, ಸಂಪ್ರದಾಯ, ಧರ್ಮದ ಬಗ್ಗೆ ಅರಿವಿದ್ದಂತೆ ಇಲ್ಲ ಎಂದು ಕಿಚಾಯಿಸಿದರು.

ಮುಸ್ಲಿಂರು ಮೆಕ್ಕಾ ಹೋಗುತ್ತಾರೆ. ಕ್ರಿಶ್ಚಿಯನ್ನರು ಇಟಲಿಗೆ ಹೋಗಿ ಪೋಪ್‌ರನ್ನು ಭೇಟಿ ಮಾಡುತ್ತಾರೆ. ಖರ್ಗೆಯವರು ಅದನ್ನು ಯಾಕೆ ಪ್ರಶ್ನೆ ಮಾಡುವುದಿಲ್ಲ ಎಂದು ಕಿಡಿಕಾರಿದರು. ಒಂದು ವೇಳೆ ಪ್ರಶ್ನಿಸಿದರೆ, ಟೀಕಿಸಿದರೆ ಖರ್ಗೆ ಅಷ್ಟೆ ಅಲ್ಲ ಇಡಿ ಕಾಂಗ್ರೆಸ್ ಅಸ್ತಿತ್ವವೇ ಉಳಿಯೋದಿಲ್ಲ. ಹೀಗಾಗಿ ಅವರು ಹಿಂದು

ಧರ್ಮ ಮತ್ತು ಹಿಂದುಗಳ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಇದು ಮುಸ್ಲಿಂ ತುಷ್ಠೀಕರಣ ಅಲ್ಲದೆ ಮತ್ತೇನು ಎಂದು ಮರಳಿ ಮಾಧ್ಯಮದವರಿಗೆ ಪ್ರಶ್ನೆ ಹಾಕಿದರು. ಅವರಿಗೆ ಧೈರ್ಯವಿದ್ದರೆ ಮುಸ್ಲಿಂ ಮತ್ತು ಕ್ರೆÊಸ್ತರ ಬಗ್ಗೆ ಪ್ರಶ್ನೆ ಮಾಡಲಿ ಎಂದು ಸವಾಲು ಹಾಕಿ ತಿರುಗೇಟು ನೀಡಿದರು.

ಕೇಂದ್ರ ಸಚಿವ ಅಮಿತ್ ಷಾ ಅವರು ನೀರಿನಲ್ಲಿ ಮುಳುಗಿದರೆ ಪಾಪ ಹೋಗಲ್ಲ ಎಂದಿರುವ ಖರ್ಗೆ ಅವರಿಗೆ, ಈಗ ಪಾಪದ ಪ್ರಜ್ಞೆ ಕಾಡುತ್ತಿರುವಂತಿದೆ. ಬೇಕಿದ್ದರೆ ಅವರೊಮ್ಮೆ ಪುಣ್ಯಸ್ನಾನ ಮಾಡಲಿ ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net