

ಮಮದಾಪುರ: ಸಮೀಪದ ಚಿಕ್ಕನಂದಿ ಗ್ರಾಮದಲ್ಲಿ ಬೆಳಗಾವಿಯ ಅಖಿಲ ಭಾರತ ಮಾನವ ಹಕ್ಕುಗಳ(ರಿ) ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಶ್ರೀ ಮಲ್ಲಿಕಾರ್ಜುನ ಜಾತ್ರೋತ್ಸವ ಹಾಗೂ ಶ್ರೀ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಸೋಮವಾರ ನೆರವೇರಿತು.
ಬೆಳಗ್ಗೆ 10 ಗಂಟೆಗೆ ಸುಮಂಗಲೆಯರ ಕುಂಭ ಸೇರಿ ವಿವಿಧ ವಾದ್ಯಗಳೊಂದಿಗೆ ಚಿಕ್ಕನಂದಿ( ಕ್ರಾಸ್)ನ ಶ್ರೀ ಹೇಮರಡ್ಡಿ ಮಲ್ಲಮ್ಮ ಸರ್ಕಲ್ನಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರ ಮೆರವಣಿಗೆ ಸಂಚರಿಸಿತು.
ಜಮಖಂಡಿಯ ಶ್ರೀದೇವಿ ತಾಯಿ, ಗೋಕಾಕದ ಸುವರ್ಣಾ ಹೊಸಮಠ ಸತ್ಸಂಗ ಕಾರ್ಯಕ್ರಮ ನೀಡಿದರು. ಅಭಾಮಾ ಹಕ್ಕುಗಳ ಸಂಸ್ಥೆ ರಾಜ್ಯ ಕಾರ್ಯದರ್ಶಿ ಸದಾನಂದ ಪಾಟೀಲ, ಡಾ.ಮಾಂತೇಶ ಕಡಾಡಿ, ಬಸವರಾಜ ಕಲ್ಯಾಣಶೆಟ್ಟಿ, ವಕೀಲ ಜಗದೀಶ ಕಂಬಾರ, ಲಗಮನಗೌಡ ಗೌಡರ, ರವಿ ಪಾಟೀಲ, ಶಿವಾನಂದ ರಾಹುತ್, ಸಿದ್ಧಾರೂಢ ಪಾಟೀಲ ಇತರರಿದ್ದರು.