ಸಹೋದರ ನಿತೀನ್ ಬಿಜೆಪಿ ಸೇರ್ಪಡೆ ಕುರಿತು ಸೌಜನ್ಯಕ್ಕೂ ಕೇಳದಿರುವುದಕ್ಕೆ ಮಾಲೀಕಯ್ಯ ಗುತ್ತೇದಾರ ಬೇಸರ

malikayya
Published on

15 ರಂದು ಮಾಲೀಕಯ್ಯ ಬೆಂಬಲಿಗರ ಸಭೆ | ಗುತ್ತೇದಾರಗೆ ಯಡಿಯೂರಪ್ಪ ಬುಲಾವ್

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬಿಜೆಪಿ ಹಿರಿಯ ನಾಯಕರಾಗಿರುವ ಮಾಲೀಕಯ್ಯ ಗುತ್ತೇದಾರ ಜಿಲ್ಲೆಯ ಭಾಜಪ ಮುಖಂಡರ ವರ್ತನೆಗೆ ಹಾಗೂ ಅವರ ಸಹೋದರ ಜಿಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ತಮ್ಮನ್ನು ಸೌಜನ್ಯಕ್ಕಾದರೂ ಒಂದು ಮಾತು ಕೇಳಲಿಲ್ಲ ಎಂದು ಮುನಿಸಿಕೊಂಡಿದ್ದಾರೆ.
ರಾಜ್ಯ ಉಪಾಧ್ಯಕ್ಷನಾಗಿ ಕೆಲಸ ಮಾಡಿರುವ ತಮ್ಮನ್ನು ಹೀಗೆ ನಿರ್ಲಕ್ಷಿಸಿದ್ದು ನೋವು ತರಿಸಿದೆ. ನಿತೀನ್ ಬಿಜೆಪಿ ಸೇರ್ಪಡೆಗೆ ಅವರ ಅಭ್ಯಂತರವಿರಲಿಲ್ಲ. ಆದರೆ, ಚರ್ಚೆ ಮಾಡಿದ್ದಾರೆ ಎಲ್ಲವೂ ಸರಳವಾಗಿ ಮುಗಿದು ಹೋಗಲಿತ್ತು. ಹಾಗೆ ಮಾಡುವ ಬದಲಿಗೆ ಇನ್ನಷ್ಟು ಕಗ್ಗಂಟುಗೊಳಿಸಿದAತಾಗಿದೆ.
ಬಿಜೆಪಿ ನಾಯಕರ ನಡೆಯಿಂದ ಬೇಸರಿಸಿಕೊಂಡಿರುವ ಮಾಲೀಕಯ್ಯ ಗುತ್ತೇದಾರ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ಮಾಡಿ ಮಾತನಾಡಿದ್ದಾರೆ. ಅಲ್ಲದೆ ಬೆಂಗಳೂರಿನ ತಮ್ಮ ಮನೆಗೆ ಬರುವಂತೆ ಬುಲಾವ್ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಈ ನಡುವೆ ಮಾಲೀಕಯ್ಯ ಗುತ್ತೇದಾರ ಹಾಗೂ ಅವರ ಪುತ್ರ ರಿತೀಶ್ ಗುತ್ತೇದಾರ ಡಿಸಿಎಂ ಶಿವಕುಮಾರ ಅವರೊಂದಿಗೆ ಇರುವ ಫೋಟೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಅದು ಈಗಿನ ಫೋಟೋವಲ್ಲ ಎಂದು ಆಪ್ತರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅಪಾರ ಅಭಿಮಾನ ಹೊಂದಿರುವ ಮಾಲೀಕಯ್ಯ ಗುತ್ತೇದಾರ ಅವರು ಮುಂದೆ ಯಾವ ಹೆಜ್ಜೆ ಇಡಬೇಕು ಎಂಬುದರ ಕುರಿತು ಅವರ ಬೆಂಬಲಿಗರ ಮತ್ತು ಕಾರ್ಯಕರ್ತರ ಸಭೆಯನ್ನು ಏ.15 ರಂದು ಕಲಬುರಗಿಯಲ್ಲಿ ಕರೆದಿದ್ದಾರೆ. ಅಲ್ಲಿ ಆಗಿರುವ ಎಲ್ಲ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಇಲ್ಲವೇ ಕಾರ್ಯಕರ್ತರೆಲ್ಲರು ಹೇಳಿದಂತೆ ನಡೆದುಕೊಳ್ಳಲು ಮಾಲೀಕಯ್ಯ ನಿರ್ಧರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net