ಮಲೆಂಗಲ್ಲು ಭಜನಾ ಮಂಡಳಿ ವಾರ್ಷಿಕೋತ್ಸವ

22
Published on

ಬೆಳ್ತಂಗಡಿ: ಮಲೆಂಗಲ್ಲು ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಮತ್ತು ಟೀಮ್ ನವಕೇಸರಿ ಪದ್ಮುಂಜ ಆಶ್ರಯದಲ್ಲಿ ಉಮಾಮಹೇಶ್ವರ ಭಜನಾ ಮಂಡಳಿಯ 31ನೇ ವಾರ್ಷಿಕೋತ್ಸವ ಮಲೆಂಗಲ್ಲಿನಲ್ಲಿ ಇತ್ತೀಚೆಗೆ ಜರುಗಿತು.

ಪ್ರಧಾನ ಅರ್ಚಕ ವಿಜಯಕುಮಾರ ತಂತ್ರಿ ನೇತೃತ್ವದಲ್ಲಿ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಸಂಜೆ ಕುಣಿತ ಭಜನೆ, ಭಾರತಮಾತೆಗೆ ಪುಷ್ಪಾರ್ಚನೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ಪ್ರತಿಭಾ ಪ್ರದರ್ಶನ, ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನದ ರಿಷಿ ಕಲಾಕೇಂದ್ರ ವಿದ್ಯಾರ್ಥಿಗಳಿಂದ ದಕ್ಷ ಯಜ್ಞ ಯಕ್ಷಗಾನ ಜರುಗಿತು. ರಿಷಿ ಪ್ರತಿಷ್ಠಾನ ಸಂಚಾಲಕಿ ದೇವಿಕಾ ಸುಳ್ಯ ದಂಪತಿಯನ್ನು ಸನ್ಮಾನಿಸಲಾಯಿತು. ಉಮಾಮಹೇಶ್ವರ ಭಜನಾ ಮಂಡಳಿ ಹಾಗೂ ಟೀಮ್ ನವಕೇಸರಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net