ಗಂಡು ಚಿರತೆ ಸೆರೆ

ಗಂಡು ಚಿರತೆ ಸೆರೆ
Published on

ಬೆಟ್ಟದಪುರ: ಬೆಟ್ಟದಪುರ ಹೊರಭಾಗದಲ್ಲಿರುವ ಸೀತೆ ಮಂಟಿಯ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೋಮವಾರ ಒಂಬತ್ತು ವರ್ಷದ ಗಂಡು ಚಿರತೆ ಸೆರೆಯಾಗಿದೆ.

20 ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಗಂಡು ಚಿರತೆಯೊಂದು ಸೆರೆಯಾಗಿತ್ತು. ಇದೀಗ ಮತ್ತೊಂದು ಚಿರತೆ ಸೆರೆಯಾಗಿದೆ.

ಸೆರೆ ಸಿಕ್ಕ ಗಂಡು ಚಿರತೆಯ ಆರೋಗ್ಯ ತಪಾಸಣೆ ನಡೆಸಿ ನಾಗರಹೊಳೆ ಸಂರಕ್ಷಣಾ ಕೇಂದ್ರಕ್ಕೆ ಬಿಡಲಾಯಿತು. ಪಟ್ಟಣ ಸಮೀಪದಲ್ಲಿಯೇ ಚಿರತೆಗಳು ಬರುತ್ತಿರುವುದು ಹೆಚ್ಚಾಗಿದೆ. ಈಗಾಗಲೇ ಪಿರಿಯಾಪಟ್ಟಣ ಸಮೀಪದಲ್ಲಿ ಎರಡು ಬೋನು ಇರಿಸಲಾಗಿದೆ. ಚಿರತೆಯ ಚಲನವಲನ ಗಮನಿಸಿ ಉಳಿದ ಚಿರತೆಗಳನ್ನು ಸೆರೆಹಿಡಿಯಲು ಕ್ರಮವಹಿಸಲಾಗುವುದು ಎಂದು ಅರಣ್ಯ ಇಲಾಖೆಯ ಆರ್‌ಎಫ್‌ಒ ಪದ್ಮಶ್ರೀ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net