ಮಾಲವಿ ಜಲಾಶಯದ ಗೇಟ್‌ಗಳ ದುರಸ್ತಿ

Dasamapura The ditch is filled with water on the road
ಹಗರಿಬೊಮ್ಮನಹಳ್ಳಿಯಿಂದ ದಶಮಾಪುರಕ್ಕೆ ತೆರಳುವ ಮಾರ್ಗಮಧ್ಯೆ ಬರುವ ಹಳ್ಳ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಜನರು ಅಪಾಯ ಲೆಕ್ಕಿಸದೆ ವಾಹನಗಳನ್ನು ತೊಳೆಯುತಿದ್ದಾರೆ.
Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ಮಾಲವಿ ಜಲಾಶಯದ 7 ಮತ್ತು 9ನೇ ಕ್ರಸ್ಟ್‌ಗೇಟ್‌ಗಳಲ್ಲಿ ನೀರು ಸೋರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ನುರಿತ ತಾಂತ್ರಿಕ ಕೆಲಸಗಾರರು ದುರಸ್ತಿ ಕಾರ್ಯ ನಡೆಯಿತು.'

ಜಲಾಶಯದ ಮೇಲ್ಭಾಗದಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಹಳ್ಳಕೊಳ್ಳ ತುಂಬಿ ಡ್ಯಾಂಗೆ ನೀರು ಹರಿದು ಬರುತ್ತಿದೆ. ಕಳೆದೆರಡು ದಿನಗಳಿಂದ 7-9ನೇ ಕ್ರಸ್ಟ್‌ಗೇಟ್‌ಗಳಲ್ಲದೆ ಮತ್ತೆರಡು ಗೇಟ್ ಮೂಲಕ ನೀರು ಪೋಲಾಗುತ್ತಿತ್ತು. ಹೀಗಾಗಿ ಶಾಸಕ ಕೆ.ನೇಮಿರಾಜ್ ನಾಯ್ಕ ಅವರು ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ದುರಸ್ತಿಗೆ ಕ್ರಮ ಕೈಗೊಂಡಿದ್ದರು.

ಶುಕ್ರವಾರ ಶಿವಮೊಗ್ಗ ಜಿಲ್ಲೆ ತೀರ್ಥಳ್ಳಿಯ ತಾಂತ್ರಿಕ ವರ್ಗದವರು ಹಾಗೂ ಉತ್ತರ ಪ್ರದೇಶದ ಕೆಲಸಗಾರರು ಬಂದು ಗೇಟ್‌ಗಳ ದುರಸ್ತಿ ಮಾಡುವ ಮೂಲಕ ವ್ಯರ್ಥವಾಗಿ ಹರಿಯುತ್ತಿರುವ ನೀರನ್ನು ನಿಯಂತ್ರಿಸಿದರು. ಈ ಕುರಿತು ಅ.14ರಂದು ವಿಜಯವಾಣಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net