ಮಹಿಳೆಯರು ಬಸ್​ ಡೋರ್​ ಮುರಿದಿಲ್ಲ, ಸಿಬ್ಬಂದಿ ಅದನ್ನು ಬದಲಾಯಿಸುತ್ತಿದ್ದರು: ಸಾರಿಗೆ ಇಲಾಖೆ ಸ್ಪಷ್ಟನೆ

Bus Door
Published on

ಮಂಡ್ಯ: ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಶಕ್ತಿ ಯೋಜನೆಗೆ ರಾಜ್ಯದ್ಯಂತ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್​ ದೊರೆತ್ತಿದ್ದು, ಬಸ್​ನಲ್ಲಿ ಪ್ರಯಾಣಿಸಲು ನೂಕುನುಗ್ಗಲು ಉಂಟಾಗುತ್ತಿದೆ.

ಸೋಮವಾರ ಮಳವಳ್ಳಿಯಲ್ಲಿ ಬಸ್​ ಹತ್ತುವ ವೇಳೆ ನೂಕುನುಗ್ಗಲು ಉಂಟಾದ ಕಾರಣ ಡೋರ್​ ಕಳಚಿ ಬಿದ್ದಿತ್ತು ಎಂಬ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಡೋರ್​ ಬದಲಾಯಿಸುತ್ತಿದ್ದರು

ಇನ್ನು ವೈರಲ್​ ಸುದ್ದಿಯ ಕುರಿತು ಡಿಪೋ ವ್ಯವಸ್ಥಾಪಕ ಶಿವಕುಮಾರ್ ಪ್ರತಿಕ್ರಿಯಿಸಿದ್ದು,​ ಕಳಚಿಕೊಳ್ಳುವ ಹಂತದಲ್ಲಿದ್ದ ಬಸ್​ನ ಡೋರ್​ಅನ್ನು ಚಾಲಕ ಹಾಗೂ ನಿರ್ವಾಹಕ ಮುಂಜಾಗ್ರತ ಕ್ರಮವಾಗಿ ಅದನ್ನು ಬದಲಾಯಿಸಿದ್ಧಾರೆ. ಮಹಿಳೆಯರೇ ಬಸ್​ನ ಡೋರ್​ ಮುರಿದರು ಎಂದರೆ ಅದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ಧಾರೆ.

Bus Door

ಮಳವಳ್ಳಿಯಿಂದ ಮೈಸೂರಿನತ್ತ ಹೊರಟ್ಟಿದ್ದ ಬಸ್​ನ ಡೋರ್​ ಮೊದಲೇ ಅಲುಗಾಡುತ್ತಿತ್ತು. ಮಹಿಳಾ ಪ್ರಯಾಣಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್​ ಏರುತ್ತಿದ್ದರು. ಬಾಗಿಲು ಕಿತ್ತು ಬರುವ ಅಪಾಯವನ್ನು ಅಇರತ ಚಾಲಕ ಹಾಗೂ ನಿರ್ವಾಹಕ ಕೂಡಲೇ ಡಿಪೋ ಅಧಿಕಾರಿಗಳಿಗೆ ಮಾಹಿತಿ ನೀಡಿ ಹೊಸ ಡೋರ್​ ಒಂದನ್ನು ತರಿಸಿಕೊಂಡಿದ್ಧಾರೆ.

ಡೋರ್​ ಬದಲಾಯಿಸುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣ ಮಹಿಳೆಯರೇ ಬಸ್​ನ ಬಾಗಿಲನ್ನು ಕಿತ್ತು ಹಾಕಿದ್ಧಾರೆ ಎಂದು ಗೊಂದಲ ಸೃಷ್ಟಿಯಾಯಿತ್ತು ಎಂದು ಘಟನೆ ಕುರಿತು ಮಾಹಿತಿ ನೀಡಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net