ಸೂಕ್ತ ಚಿಕಿತ್ಸೆಯಿಂದ ಮಲೇರಿಯ ಗುಣಮುಖ

ಸೂಕ್ತ ಚಿಕಿತ್ಸೆಯಿಂದ ಮಲೇರಿಯ ಗುಣಮುಖ
Published on

ಸುಂಟಿಕೊಪ್ಪ: ಮಲೇರಿಯ ಪೀಡಿತ ವ್ಯಕ್ತಿಯನ್ನು ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದೆಂದು ಜಿಲ್ಲಾ ಕೀಟಶಾಸ್ತ್ರಜ್ಞ ಡಾ.ಮಂಜುನಾಥ್ ಹೇಳಿದರು.

ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧ ಮಾಸಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಮಲೇರಿಯಾ ಜ್ವರ ಹಾಗೂ ಚಿಕಿತ್ಸೆ ಬಗ್ಗೆ, ಸೊಳ್ಳೆಗಳ ಜೀವನ ಚಕ್ರ ಹಾಗೂ ಡೆಂೆ, ಚಿಕೂನ್ ಗುನ್ಯಾ ಹಾಗೂ ಎಲ್ಲ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಪರಿಸರ ಸ್ವಚ್ಛತೆಯ ಬಗ್ಗೆ ನೀರಿನ ಸ್ವಚ್ಛತೆಯ ಬಗ್ಗೆ ಆರೋಗ್ಯ ಶಿಕ್ಷಣದ ಕುರಿತು ಮಾಹಿತಿ ನೀಡಲಾಯಿತು.

ಮಾದಾಪುರ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ನಿಶಾ, ಡಾ.ದರ್ಶನ್, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ವಿಶ್ವಜ್ಞಾ, ಶಿವಪ್ಪ, ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಮಾರ್ಗರೇಟ್ ಆಳ್ವ, ಗ್ರೀಷ್ಮಾ ಸುಶೀಲಾ, ಸಮುದಾಯ ಆರೋಗ್ಯ ಅಧಿಕಾರಿ ಸಿಂಧು, ಮನೋಜ್, ಶಫಿನಾ, ಶ್ವೇತಾ, ಮೇನಕಾ, ಪ್ರೀತಿ, ಚೈತ್ರಾ ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net