ಮಲಪ್ರಭಾ ನದಿ ಸ್ವಚ್ಛತೆಗೆ ಎಲ್ಲರೂ ಮುಂದಾಗಿ

17blh3 v i patil news
Published on

ಬೈಲಹೊಂಗಲ: ಪರಿಸರ ರಣೆ, ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಭಾಗದ ರೈತರ, ಜನರ ಜೀವನಾಡಿಯಾಗಿರುವ ಮಲಪ್ರಭಾ ನದಿಯ ದಡದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮೇ 18ರಂದು ಬೆಳಗ್ಗೆ 8ಕ್ಕೆ ಜಾಲಿಕೊಪ್ಪ ತಪೋೇತ್ರದ ಶಿವಾನಂದ ಗುರೂಜಿ ಅವರ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಲ್ಲರೂ ಕೈಜೋಡಿಸಿ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಪಟ್ಟಣದ ಗೃಹ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜನತೆ ನದಿ ದಡದಲ್ಲಿ ಕಸ ಮತ್ತು ತ್ಯಾಜ್ಯವಸ್ತು ಎಸೆಯುತ್ತಿದ್ದು, ಇದರಿಂದ ನೀರು ಕಲುಷಿತಗೊಂಡಿದೆ. ಜನತೆ ಕೂಡಲೇ ಕಸ&ತ್ಯಾಜ್ಯ ಎಸೆಯುವುದು ನಿಷೇಧಿಸಬೇಕು. ಸ್ವಚ್ಛಂದ ಪರಿಸರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಅಭಿಯಾನದಲ್ಲಿ ವಿವಿಧ ಸಂಟನೆಗಳ ಸದಸ್ಯರು, ಸಾಮಾಜಿಕ ಕಾರ್ಯಕರ್ತರು, ವೈದ್ಯರು, ವಕೀಲರ ಸಂ, ಕಲಾವಿದರ ಬಳಗ, ವಿವಿಧ ಶಾಲೆ, ಕಾಲೇಜುಗಳ ಪ್ರಾಂಶುಪಾಲರು, ಶಿಕರು, ವಿದ್ಯಾರ್ಥಿಗಳು, ಸುತ್ತಮುತ್ತಲಿನ ರೈತರು ಪಾಲ್ಗೊಳ್ಳಲಿದ್ದಾರೆ ಎಂದರು.

ರೈತ ಮುಖಂಡರಾದ ಮುದಕಪ್ಪ ತೋಟಗಿ, ಮಹಾಂತೇಶ ಕಮತ ಮಾತನಾಡಿ, ಡಾ.ವಿಶ್ವನಾಥ ಪಾಟೀಲ ಅಭಿಮಾನಿ ಬಳಗದಿಂದ ಹಾಗೂ ವಿವಿಧ ಸಂಟನೆಗಳಿಂದ ಕಳೆದ 2 ವರ್ಷಗಳಿಂದ ಮಲಪ್ರಭಾ ನದಿ ದಡದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿದ್ದು, ಜನತೆ ಕೂಡ ಸಹಕರಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಮಡಿವಾಳಪ್ಪ ಹೋಟಿ, ಚಂದನ ಕೌಜಲಗಿ, ಅರುಣ ಬೋಳೆತ್ತಿನ, ನಾಗಪ್ಪ ಗುಂಡ್ಲೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net