ಮಾಲಕಾರ್​ ಟ್ರೇಡ್​ ತರಬೇತಿ ಸಮಾರೋಪ

7MUDALGI2
Published on

ಮೂಡಲಗಿ: ಸಮೀಪದ ತುಕ್ಕಾನಟ್ಟಿಯ ಐಸಿಎಆರ್​ ಬರ್ಡ್ಸ್​ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಸಾಂಪ್ರದಾಯಿಕ ಮಾಲಕಾರ್​ ಟ್ರೇಡ್​ ಕುರಿತು ಏಳು ದಿನಗಳ ತರಬೇತಿ ಜರುಗಿತು.

ಗ್ರಾಮೀಣ ಕುಶಲ ಕರ್ಮಿಗಳಲ್ಲಿನ ಹಾರ ತಯಾರಿಕೆಯ ಸಾಂಸತಿಕ ಕರಕುಶಲತೆ ಪುನರುಜ್ಜೀವನಗೊಳಿಸುವ ಜತೆಗೆ ಉತ್ತೇಜಿಸಲು, ಕೌಶಲ ಮತ್ತು ಸ್ವ&ಉದ್ಯೋಗ ಅವಕಾಶ ಹೆಚ್ಚಿಸಲು ಈ ತರಬೇತಿ ವಿನ್ಯಾಸಗೊಳಿಸಲಾಗಿದೆ.

ತೋಟಗಾರಿಕೆ ವಿಜ್ಞಾನಿ ಪರಶುರಾಮ ಪಾಟೀಲ ಮಣಿಗಳ ಹಾರ ತಯಾರಿಕೆ, ಪ್ರಾಯೋಗಿಕ ಕೆಲಸ, ಸೃಜನಶೀಲತೆ ಮತ್ತು ಮುಕ್ತಾಯದ ಮೇಲೆ ಕೇಂದ್ರೀಕರಿಸುವುದು. ಅಲಂಕಾರಿಕ ಹೂವು ಮತ್ತು ವಸ್ತುಗಳ ತಯಾರಿಕೆ ಸೇರಿ ಕಾಗದದ ಕರಕುಶಲತೆಯ ಪರಿಚಯ ಮಾಡಿದರು. ಹೂಗುಚ್ಛ ತಯಾರಿಕೆ, ವಿನ್ಯಾಸ, ಬಣ್ಣ ಸಂಯೋಜನೆ ಮತ್ತು ಸುತ್ತುವ ಶೈಲಿಗಳಿಗೆ ಒತ್ತು ನೀಡುವ ಕುರಿತು ತರಬೇತಿ ನೀಡಿದರು.

ಕೆವಿಕೆ ಸಂಸ್ಥೆಯ ಅಧ್ಯ ಆರ್​.ಎಂ.ಪಾಟೀಲ, ಕೆವಿಕೆ ಬೆಳಗಾವಿ&1ರ ಹಿರಿಯ ವಿಜ್ಞಾನಿ ಡಾ.ಡಿ.ಎ.ಮೇತ್ರೆ, ವಿಜ್ಞಾನಿ ರೇಖಾ ಕಾರಬಾರಿ ಇತರರಿದ್ದರು. ಒಟ್ಟು 11 ಜನರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net