ಮೋದಿ ಮತ್ತೊಮ್ಮೆ ಅಧಿಕಾರ ಹಿಡಿಯುವಂತೆ ನೋಡಿಕೊಳ್ಳಿರಿ

ಕೆ.ಆರ್.ನಗರದ ಡಾ.ರಾಜಕುಮಾರ್ ಬಾನಂಗಳದಲ್ಲಿ  ಆಯೋಜಿಸಿದ್ದ ಮೋದಿ ಮತ್ತೊಮ್ಮೆ ಮತ್ತು ಜೈಶ್ರೀರಾಮ್ ಅಭಿಯಾನ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಸನ್ಮಾನಿಸಲಾಯಿತು. ಯುವ ಬ್ರಿಗೇಡ್ ತಾಲೂಕು ಸಂಚಾಲಕ ಕೃಷ್ಣಭಟ್, ಪದಾಧಿಕಾರಿಗಳಾದ, ನಂಜುಂಡ, ಆದರ್ಶ, ಮನೋಹರ್, ಪಂಕಜ್, ಉಮಾಶಂಕರ್, ಶ್ರೀನಿವಾಸ್ ಇದ್ದರು.
ಕೆ.ಆರ್.ನಗರದ ಡಾ.ರಾಜಕುಮಾರ್ ಬಾನಂಗಳದಲ್ಲಿ ಆಯೋಜಿಸಿದ್ದ ಮೋದಿ ಮತ್ತೊಮ್ಮೆ ಮತ್ತು ಜೈಶ್ರೀರಾಮ್ ಅಭಿಯಾನ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಸನ್ಮಾನಿಸಲಾಯಿತು. ಯುವ ಬ್ರಿಗೇಡ್ ತಾಲೂಕು ಸಂಚಾಲಕ ಕೃಷ್ಣಭಟ್, ಪದಾಧಿಕಾರಿಗಳಾದ, ನಂಜುಂಡ, ಆದರ್ಶ, ಮನೋಹರ್, ಪಂಕಜ್, ಉಮಾಶಂಕರ್, ಶ್ರೀನಿವಾಸ್ ಇದ್ದರು.
Published on

ಕೆ.ಆರ್.ನಗರ: ಭಾರತವನ್ನು ಜಗತ್ತಿನ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಿ ದೇಶದ ಘನತೆಯನ್ನು ಹೆಚ್ಚಿಸುವ ಶಪಥ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಪ್ರತಿಯೊಬ್ಬ ಭಾರತೀಯನೂ ನೋಡಿಕೊಳ್ಳಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಪಟ್ಟಣದ ಡಾ.ರಾಜಕುಮಾರ್ ಬಾನಂಗಳದಲ್ಲಿ ನಮೋ ಯುವ ಬ್ರಿಗೇಡ್ ವತಿಯಿಂದ ಸೋಮವಾರ ರಾತ್ರಿ ಆಯೋಜಿಸಿದ್ದ ಮೋದಿ ಮತ್ತೊಮ್ಮೆ ಮತ್ತು ಜೈ ಶ್ರೀರಾಮ್ ಅಭಿಯಾನದಲ್ಲಿ ಮಾತನಾಡಿದ ಅವರು, ನಮ್ಮ ಪ್ರಧಾನಿ ವಿಶ್ವ ನಾಯಕರಾಗಿದ್ದು ಅವರಿಂದ ಮಾತ್ರ ದೇಶದ ಉದ್ದಾರ ಸಾಧ್ಯ ಎಂದರು.
ಕಳೆದ 60 ವರ್ಷಗಳಲ್ಲಿ ಸಾಧ್ಯವಾಗದ ಅಭಿವೃದ್ದಿ ಕೆಲಸಗಳನ್ನು 10 ವರ್ಷದಲ್ಲಿ ಪೂರೈಸಿರುವ ಮೋದಿ ಭಾರತದ ಜನರೇ ನನ್ನ ಪರಿವಾರ ಎಂದು ಭಾವಿಸಿ ಕುಟುಂಬವನ್ನು ತೊರೆದು ದೇಶ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದು, ಅವರಿಗೆ ಪ್ರತಿಯೊಬ್ಬರು ಬೆಂಬಲ ನೀಡಬೇಕು ಎಂದರು.

ಹಿಂದುಗಳ 500 ವರ್ಷಗಳ ಕನಸಿನ ಕೇಂದ್ರವಾಗಿದ್ದ ರಾಮ ಮಂದಿರ ನಿರ್ಮಾಣ ಮಾಡಿರುವ ಗರಿಮೆ ಮತ್ತು ಹಿರಿಮೆ ಬಿಜೆಪಿಗೆ ಯಾಕೆ ಎಂದು ಕಾಂಗ್ರೆಸ್ಸಿಗರು ಪ್ರಶ್ನೆ ಮಾಡುತ್ತಿದ್ದು, ಆರಂಭದಿಂದ ಅಂತ್ಯದವರೆಗೂ ರಾಮಲಲ್ಲಾನ ಪ್ರತಿಷ್ಠಾಪನೆಗೆ ಟೊಂಕಕಟ್ಟಿ ನಿಂತಿದ್ದವರಿಗೆ ಅದರ ಕೀರ್ತಿ ಸಲ್ಲದೆ ಮತ್ಯಾರಿಗೆ ಸೇರಬೇಕೆಂದು ಪ್ರಶ್ನಿಸಿದರು.

ದೇಶದ ಉದ್ದಗಲಕ್ಕೂ ಅಭಿವೃದ್ದಿಯ ಮಹಾಪೂರವನ್ನೇ ಹರಿಸಿ ಜಾತ್ಯತೀತವಾಗಿ ಆಡಳಿತ ನಡೆಸುತ್ತಿರುವ ನಮ್ಮ ಪ್ರಧಾನ ಮಂತ್ರಿಗಳು ವಿಶ್ವನಾಯಕರಾಗಿ ಹೊರ ಹೊಮ್ಮಿದ್ದು ಬಡತನ ನಿರ್ಮೂಲನೆ, ಸಶಕ್ತ ಸೇನೆ, ಉದ್ಯೋಗ ಸೃಷ್ಟಿ, 80 ಕೋಟಿ ಬಡವರಿಗೆ ಉಚಿತ ಆಹಾರ ವಿತರಣೆ, ಅತ್ಯುತ್ತಮ ಆರೋಗ್ಯ ಸೇವೆ ಸೇರಿದಂತೆ ಇತರ ನೂರಾರು ಶಾಶ್ವತ ಕೆಲಸಗಳನ್ನು ಮಾಡಿದ್ದಾರೆ ಎಂದರು.

ಜಾತಿ ಮತ್ತು ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿರುವ ಕಾಂಗ್ರೆಸ್ಸಿಗರಿಗೆ ಮೋದಿ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲವಾಗಿದ್ದು, ಸಮಸ್ತ ಭಾರತೀಯರು ಮೂರನೇ ಬಾರಿ ಅವರನ್ನು ಪ್ರಧಾನಮಂತ್ರಿಗಳನ್ನಾಗಿ ಮಾಡಲು ನಿರ್ಧಾರ ಮಾಡಿದ್ದು ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಯುವ ಬ್ರಿಗೇಡ್ ತಾಲೂಕು ಸಂಚಾಲಕ ಕೃಷ್ಣಭಟ್, ಪದಾಧಿಕಾರಿಗಳಾದ ನಂಜುಂಡಾ, ಆದರ್ಶ, ಮನೋಹರ್, ಪಂಕಜ್, ಉಮಾಶಂಕರ್, ಶ್ರೀನಿವಾಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net