ಸರ್ಕಾರದಿಂದ ಸಿಗುವ ಯೋಜನೆಯ ಸದುಪಯೋಗ ಆಗಲಿ

hbr (3)
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ವಿಶೇಷ ಗ್ರಾಮ ಸಭೆಗಳಿಗೆ ಹೆಚ್ಚು ಜನ ಬರಬೇಕು. ಯೋಜನೆಯ ಸಮರ್ಪಕ ಉದ್ದೇಶ ತಿಳಿಯಬೇಕಾದರೆ ಜನರು ಭಾಗವಹಿಸಿಕೆ ಮುಖ್ಯವಾಗಿರುತ್ತದೆ. ಸರ್ಕಾರದಿಂದ ಸಿಗುವ ಯೋಜನೆಯ ಸದುಪಯೋಗ ಆಗಬೇಕಾದರೆ ಲೆಕ್ಕಪರಿಶೋಧನೆ ಅತಿ ಅವಶ್ಯಕ. ಜನರಿಗೆ ಸೇವೆ ನೀಡಲು ಹೆಬ್ರಿ ಪಂಚಾಯತ್ ವಿಶೇಷ ಮುತುವರ್ಜಿ ವಹಿಸಿದೆ ಎಂದು ಕಾರ್ಕಳ ತಾಲೂಕು ಪಂಚಾಯತ್ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಜಿ.ಎಸ್. ಕುಂಬಾರ್ ಹೇಳಿದರು.

ಹೆಬ್ರಿ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಾಗೂ 15ನೇ ಹಣಕಾಸು ಆಯೋಗದ ಅನುದಾನ ಮತ್ತು ಜಿಲ್ಲಾ ಪಂಚಾಯಿತಿ, ತಾಪಂ ಅನುದಾನದ ರಾಜ್ಯ ಹಣಕಾಸು ಆಯೋಗದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೆಬ್ರಿ ಗ್ರಾಪಂ ಅಧ್ಯಕ್ಷ ತಾರಾನಾಥ ಎಸ್.ಬಂಗೇರ ಮಾತನಾಡಿ, ನಮ್ಮಲ್ಲಿ ಯಾವುದೇ ಹಣಕಾಸಿನ ದುರುಪಯೋಗ ಆಗಿಲ್ಲ. ಲೋಪಗಳಿದ್ದರೆ ಸರಿಪಡಿಸಿಕೊಳ್ಳುತ್ತೇವೆ. ನಾವು ಏನು ಮಾಡಿದರು ದಾಖಲೆಗಳಿವೆ. ಅತಿ ಹೆಚ್ಚು ಜನ ಯೋಜನೆಯ ಲಾಭ ಪಡೆದಿದ್ದರೂ ಕೆಲವರು ಮಾತ್ರ ಬಂದಿರುವುದು ಬೇಸರ ತಂದಿದೆ. ಸಭೆಗೆ ಮುಂದೆ ಹೆಚ್ಚು ಜನ ಬರಬೇಕು ಎಂದರು.

ಪಿಡಿಒ ಸದಾಶಿವ ಸೇರ್ವೆಗಾರ್, ಹೆಬ್ರಿ ತಾಪಂ ಸಾಮಾಜಿಕ ಪರಿಶೋಧನೆಯ ಸಂಪನ್ಮೂಲ ವ್ಯಕ್ತಿ ಪ್ರವೀಣ್ ಆಚಾರ್ಯ, ಉಪಾಧ್ಯಕ್ಷೆ ಸುಪ್ರಿಯಾ, ಇಂಜಿನಿಯರ್ ಆದಿನಾಥ್, ಗ್ರಾ.ಪಂ. ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net