ಮಕ್ಕಳನ್ನು ಬಾಲ್ಯದಿಂದಲೇ ಸುಸಂಸ್ಕೃತರನ್ನಾಗಿಸಿ

ಹನುಮಸಾಗರ ಸಮೀಪದ ಮಿಯ್ಯಪೂರ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾನವೀಯ ಮೌಲ್ಯಗಳು, ಶಿಕ್ಷಣ ಕುರಿತ ಕಾರ್ಯಾಗಾರ ಹಾಗೂ ಪತ್ರಿಕಾ ದಿನ ಕಾರ್ಯಕ್ರಮವನ್ನು ಶಿಕ್ಷಣ ಪ್ರೇಮಿ ವಿರೂಪಾಕ್ಷಗೌಡ ಮ್ಯಾಗೇರಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ನಾಗನಗೌಡ ಪೊಲೀಸ್‌ಪಾಟೀಲ್, ಮುಖ್ಯಶಿಕ್ಷಕ ಖಾಜಾ ಹುಸೇನ್ ಒಂಟೆಳಿ, ಗ್ರಾಪಂ ಸದಸ್ಯ ಶರಣಗೌಡ ಮ್ಯಾಗೇರಿ ಇತರರಿದ್ದರು.

Published on

ಹನುಮಸಾಗರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕು ಎಂದು ಸಂಪನ್ಮೂಲ ವ್ಯಕ್ತಿ ನಾಗನಗೌಡ ಪೊಲೀಸ್‌ಪಾಟೀಲ್ ಹೇಳಿದರು.

ಸಮೀಪದ ಮಿಯ್ಯಪೂರ ಸಹಿಪ್ರಾ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾನವೀಯ ಮೌಲ್ಯಗಳು, ಶಿಕ್ಷಣ ಕುರಿತ ಕಾರ್ಯಾಗಾರ ಹಾಗೂ ಪತ್ರಿಕಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕ ಯುಗದಲ್ಲಿ ಮಾನವೀಯ ಮೌಲ್ಯಗಳು ನಶಿಸಿ ಹೋಗಿವೆ. ಮಕ್ಕಳಿಗೆ ಸಂಬಂಧಗಳ ಅರಿವು ಇಲ್ಲದಂತಾಗಿದೆ. ಬಹಳಷ್ಟು ವಿದ್ಯಾವಂತರು ಪಾಲಕರನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದಾರೆ. ಮಕ್ಕಳನ್ನು ಬಾಲ್ಯದಿಂದಲೇ ಸುಸಂಸ್ಕೃತರನ್ನಾಗಿ ಬೆಳೆಸಬೇಕು. ಗುರುಗಳು ಹಾಗೂ ಹಿರಿಯರನ್ನು ಗೌರವದಿಂದ ಕಾಣಬೇಕು ಎಂದರು.

ಮುಖ್ಯಶಿಕ್ಷಕ ಖಾಜಾ ಹುಸೇನ್ ಒಂಟೆಳಿ, ಗ್ರಾಪಂ ಸದಸ್ಯ ಶರಣಗೌಡ ಮ್ಯಾಗೇರಿ, ಎಸ್ಡಿಎಂಸಿ ಸದಸ್ಯ ಶೇಕಪ್ಪ ಬಡಿಗೇರ, ಪತ್ರಕರ್ತ ಶ್ರೀನಿವಾಸ ಜಹಗೀರದಾರ, ಶಿಕ್ಷಕರಾದ ಶಾಂತಾಬಾಯಿ ಪಟ್ಟಣಶೆಟ್ಟಿ, ಪರಶುರಾಮಪ್ಪ ನಾಗಣ್ಣನವರ, ಲಕ್ಷ್ಮೀ ವಾಲಿಕಾರ, ಸಂಗಮ್ಮ ಮಣ್ಣೇರಿ, ಲಕ್ಷ್ಮೀ ಮಾಲಿಪಾಟೀಲ್, ಸಿದ್ದಮ್ಮ ರಾಮವಾಡಗಿ, ಪ್ರಮುಖರಾದ ಏಕನಾಥ ಮೆದಿಕೇರಿ, ಶಿವರಾಜ ಬಂಡಿಹಾಳ, ಖಾಜಾಸಾಬ ಮುದಗಲ್, ವಿರೂಪಾಕ್ಷಗೌಡ ಮ್ಯಾಗೇರಿ, ಗವಿಸಿದ್ದಪ್ಪ ಕುದರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net