ಮಟ್ಕಾ, ಇಸ್ಪೀಟ್ ದಂಧೆ ಬಂದ್ ಮಾಡಿಸಿ

24-RNR-03
Published on

ರಾಣೆಬೆನ್ನೂರ: ತಾಲೂಕಿನ ಕುಮಾರಪಟ್ಟಣ, ಕವಲೆತ್ತು, ಕೋಡಿಯಾಲ ಹೊಸಪೇಟೆ ಸೇರಿ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿರುವ ಮಟ್ಕಾ ಹಾಗೂ ಇಸ್ಪೀಟ್ ದಂಧೆ ಬಂದ್ ಮಾಡುವಂತೆ ಒತ್ತಾಯಿಸಿ ಮಾಕನೂರ ಗ್ರಾಮದ ರೈತ ಸಂಘದ ಕಾರ್ಯಕರ್ತರು ಬುಧವಾರ ಶಾಸಕ ಅರುಣಕುಮಾರ ಪೂಜಾರ ಅವರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಈರಣ್ಣ ಹಲಗೇರಿ ಮಾತನಾಡಿ, ಮಾಕನೂರ ಸೇರಿ ವಿವಿಧ ಗ್ರಾಮಗಳಲ್ಲಿ ನಿತ್ಯವೂ ಮಟ್ಕಾ ಹಾಗೂ ಇಸ್ಪೀಟ್ ದಂಧೆ ಹೆಚ್ಚುತ್ತಿದೆ. ಇದರಿಂದ ಜನತೆ ಕೂಲಿ ಕೆಲಸ ಬಿಟ್ಟು ಇಸ್ಪೀಟ್, ಮಟ್ಕಾ ಆಡುತ್ತ ಕಾಲ ಕಳೆಯುತ್ತಿದ್ದಾರೆ. ಅಲ್ಲದೆ, ಹಣ ಕಳೆದುಕೊಂಡು ಸಾಲಗಾರರಾಗುತ್ತಿದ್ದಾರೆ. ಪರಿಣಾಮ ಮಹಿಳೆಯರು ಹೊರಗಡೆ ಹೋಗಿ ದುಡಿದು ಗಂಡಂದಿರಿಗೆ ಹಣ ತಂದು ಕೊಡುವ ಪರಿಸ್ಥಿತಿ ನಿರ್ವಣವಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಂಡು ಮಟ್ಕಾ ಹಾಗೂ ಇಸ್ಪೀಟ್ ದಂಧೆಯನ್ನು ಬಂದ್ ಮಾಡಿಸಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ಶಂಕರ ಜಿ.ಎಸ್., ರೈತ ಮುಖಂಡರಾದ ರಾಜು ರ್ಬಾ, ಮಂಜಪ್ಪ ಕ್ಯಾತೇರಿ, ಬಸನಗೌಡ ನಂದಿಗಾವಿ, ಸೋಮಪ್ಪ ರ್ಬಾ, ಭೀಮೇಶ, ರಾಜು ನೇಕಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net