

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಶೈಕ್ಷಣಿಕ ಸಂಸ್ಥೆಗಳು ಮಕ್ಕಳ ಭವಿಷ್ಯ ರೂಪಿಸುತ್ತವೆ. ಶಿಕ್ಷಣದಿಂದ ಮಾತ್ರ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಈ ಶೈಕ್ಷಣಿಕ ವರ್ಷವೂ ಶುಭಕರವಾಗಿರಲಿ ಎಂದು ಮಜಿ ವೀರಕಂಬ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ ಸಿಂಗೇರಿ ಹೇಳಿದರು.
ಶಾಲಾ ಆರಂಭೋತ್ಸವ ಉದ್ಘಾಟಿಸಿ ಮಾತನಾಡಿದರು. ಮೊಹಮ್ಮದ್ ಶರೀಫ್ ಮಾತನಾಡಿ, ಶಿಕ್ಷಕರು ಮಕ್ಕಳ ಏಳಿಗೆಗೆ ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿರುತ್ತಾರೆ. ತನ್ನ ವೃತ್ತಿಯಲ್ಲಿ ಸ್ವಾರ್ಥ ತೋರದೆ ನಿಸ್ವಾರ್ಥಿಯಾಗಿ ಸೇವೆ ಸಲ್ಲಿಸುತ್ತಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿರುತ್ತಾರೆ ಎಂದರು.
ವಿದ್ಯಾರ್ಥಿಗಳನ್ನು ಬ್ಯಾಂಡ್ ವಾದ್ಯಗಳ ಮೂಲಕ ಶಾಲೆಗೆ ಬರಮಾಡಿಕೊಳ್ಳಲಾಯಿತು. ವೀರಕಂಬ ಗ್ರಾಪಂ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು. ಹಳೇ ವಿದ್ಯಾರ್ಥಿ, ಪಿಡಬ್ಲುೃಡಿ ಗುತ್ತಿಗೆದಾರ ಪದ್ಮನಾಭ ಎ. ಸ್ಮಾರ್ಟ್ ಟಿವಿ ಕೊಡುಗೆ ನೀಡಿದರು.
ಬಳಿಕ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ರಮೇಶ್ ಗೌಡ ಮೈರಾ, ಪ್ರಸಾದ್ ನಂದನ ತಿಮಾರ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಬೆನೆಡಿಕ್ಟ್ ಅಗ್ನೇಸ್ ಮಂಡೋಂನ್ಸಾ ಸ್ವಾಗತಿಸಿ. ಸಂಪ್ರಿಯ ವಂದಿಸಿ, ಸಂಗೀತಾ ಶರ್ಮ ಪಿ.ಕಾರ್ಯಕ್ರಮ ನಿರೂಪಿಸಿದರು.