ಆರೋಗ್ಯ ಕಾಪಾಡುವುದು ಎಲ್ಲರ ಕರ್ತವ್ಯ

1Savadatti1
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.43546277, 0.3174585);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 35;
Published on

ಸವದತ್ತಿ: ಅನಾರೋಗ್ಯಕ್ಕೆ ತುತ್ತಾದ ಪ್ರತಿಯೊಬ್ಬ ರೋಗಿಗೆ ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸುವುದು ವೆದ್ಯರ ಕರ್ತವ್ಯ ಎಂದು ಎಲುಬು& ಕೀಲು ಡಾ. ಹೇಮಂತ್​ ಭಸ್ಮೆ ಹೇಳಿದರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಭಾರತೀಯ ವೆದ್ಯಕಿಯ ಸಂ ಹಾಗೂ ಆಯುಷ್​ ವೆದ್ಯಕಿಯ ಸಂದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೈದ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ತಾಲೂಕು ವೆದ್ಯಾಧಿಕಾರಿ ಎಚ್​.ಎಂ. ಮಲ್ಲನಗೌಡರ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲೂ ಅತ್ಯಾಧುನಿಕ ಸೇವೆ ಒದಗಿಸುತ್ತಿದ್ದು, ಕೆಲವೇ ದಿನಗಳಲ್ಲಿ ಸಿಟಿ, ಎಂಆರ್​ಐ ಸ್ಕಾನ್​ ನಮ್ಮ ಆಸ್ಪತ್ರೆಯಲ್ಲಿ ಲಭ್ಯವಾಗಲಿವೆ. ಎಲ್ಲ ವೆದ್ಯರು ಒಟ್ಟಾಗಿ ಕಾರ್ಯನಿರ್ವಹಿಸಿದರೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಯಶಸ್ವಿಯಾಗಲಿವೆ ಎಂದರು.

ಹೃದಯ ತ ಡಾ. ಅನಿಲ ಹಣಮಂತಗಡ ಮಾತನಾಡಿ, ವೈದ್ಯರು ಹಸನ್ಮುಖಿಗಳಾಗಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದರು. ತಾಲೂಕು ಆರೋಗ್ಯಾಧಿಕಾರಿ ಶ್ರೀಪಾದ ಸಬನೀಸ್​, ಡಾ. ನಯನಾ ಭಸ್ಮೆ, ಡಾ. ಅನೂಪ ಕಬ್ಬಿನ, ಡಾ.ಸಲೀಂ ಕಿತ್ತೂರ, ಡಾ.ವಿ.ಎಂ. ನರಗುಂದ, ಡಾ.ರಿಜ್ವಾನ್​ ದೇಸಾಯಿ, ಡಾ.ಪಿ.ವಿ. ಕಾಡರಕೊಪ್ಪ, ಡಾ.ಹರ್ಷಾ ತೋಡಕರ, ಡಾ. ಜಿ.ಎಲ್​. ಮೇಟಿ, ಡಾ.ಉದಯ ಹುರಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net