ಗ್ರಾಮಗಳ ನೈರ್ಮಲ್ಯ ಕಾಪಾಡಿ

Published on

ಪಾತಪಾಳ್ಯ: ಗ್ರಾಮ ನೈರ್ಮಲ್ಯ ಕಾಪಾಡಿದಾಗ ರೋಗಗಳಿಂದ ಮುಕ್ತರಾಗಬಹುದು ಎಂದು ರಾಶ್ಚೆರವು ಪಿಡಿಒ ಕೆ.ವೆಂಕಟಾಚಲಪತಿ ತಿಳಿಸಿದರು. ರಾಶ್ಚೆರವು ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದರು.ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯ ಜತೆಗೆ ವೈಯಕ್ತಿಕ ಸ್ವಚ್ಛತೆಗೂ ಆದ್ಯತೆ ನೀಡಿ. ತ್ಯಾಜ್ಯ ವಸ್ತು, ಪ್ಲಾಸ್ಟಿಕ್​ ಎಲ್ಲೆಂದರಲ್ಲಿ ಹಾಕುವುದರಿಂದ ಅನೈರ್ಮಲ್ಯ ಉಂಟಾಗುತ್ತದೆ.ಮಲಿನ ನೀರು ಶೇಖರಣೆ, ಚರಂಡಿ ಸ್ವಚ್ಛತೆ ಇಲ್ಲದೆ ಇರುವುದು, ಬಯಲು ಮಲ ವಿಸರ್ಜನೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವುಂಟು ಇದರ ಬಗ್ಗೆ ಎಚ್ಚರ ವಹಿಸಬೇಕು.ಪರಿಸರ ಅಭಿವೃದ್ಧಿಗೆ ಗಿಡ&ಮರ ಬೆಳೆಸಬೇಕು ಎಂದರು. ಕರ ವಸೂಲಿಗಾರ ನಂಜುಂಡಪ್ಪ, ಸಿಬ್ಬಂದಿ ಸೀನಪ್ಪ, ರಾಮಚಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net