

ತಾವರಗೇರಾ: ಸಮೀಪದ ಹಿರೇತೆಮ್ಮಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶೌಚಗೃಹ ಕಟ್ಟಡವನ್ನು ಮಂಗಳವಾರ ಸಂಗನಾಳ ಗ್ರಾಪಂ ಅಧ್ಯಕ್ಷ ರೇವಣಪ್ಪ ಪುರ ಉದ್ಘಾಟಿಸಿದರು.
ಇದನ್ನೂ ಓದಿ: ತಹಸೀಲ್ದಾರ್ ಕಚೇರಿ ಶೌಚಗೃಹಕ್ಕೆ ಬೀಗ
ನಂತರ ಮಾತನಾಡಿ, ಹಲವು ದಿನಗಳಿಂದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಬೇಡಿಕೆಯಂತೆ ನರೇಗಾ ಯೋಜನೆಯಡಿ ಶೌಚಗೃಹ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಉಪಯೋಗಿಸಬೇಕು ಮತ್ತು ಸ್ವಚ್ಛವಾಗಿ ಇಟ್ಟಕೊಳ್ಳಬೇಕು ಎಂದರು.
ಸಂಗನಾಳ ಗ್ರಾಪಂ ಪಿಡಿಒ ಕವಿತಾ ಪಾಟೀಲ್, ಸದಸ್ಯರಾದ ಛತ್ರಪ್ಪ ಕಂಬಳಿ, ರಾಮನಗೌಡ ಬಿಂಗಿ, ದುರುಗೇಶ ಕಾಮನೂರು, ಎಸ್‌ಡಿಎಂಸಿ ಅಧ್ಯಕ್ಷ ನಡುಗಡ್ಡೆಪ್ಪ ಕಂಬಳಿ, ಮುಖ್ಯಶಿಕ್ಷಕ ಉಮೇಶ ಅಂಗಡಿ, ಕುಂಟೆಪ್ಪ, ಯಮನೂರ ಕನ್ನಾಳ, ಹನುಮೇಶ ಕುರಿ ಇತರರಿದ್ದರು.