ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
ಆಸ್ಪತ್ರೆಯಲ್ಲಿ ವೈದ್ಯರು ಸಮರ್ಪಕವಾಗಿ ಚಿಕಿತ್ಸೆ ನೀಡುತ್ತಿದ್ದಾರಾ..ಔಷಧಗಳನ್ನು ನೀಡುತ್ತಿದ್ದಾರಾ..ಇಲ್ಲವೇ ಚೀಟಿಗಳನ್ನು ಬರೆದುಕೊಡುತ್ತಾರಾ ಎಂದು ಜಿಪಂ ಸಿಇಒ ಡಾ.ನವೀನ್ ಭಟ್ ರೋಗಿಗಳನ್ನು ವಿಚಾರಿಸಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್ ಭೇಟಿ ನೀಡಿ ನೇರವಾಗಿ ವಾರ್ಡ್ಗಳಿಗೆ ಭೇಟಿ ನೀಡಿ ರೋಗಿಗಳ ಬಳಿ ವೈದ್ಯರ ಸಮರ್ಪಕವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಕಾಲ ಕಾಲಕ್ಕೆ ಹಾಲು, ಬ್ರೆಡ್, ತಿಂಡಿ ಊಟ ನೀಡಲಾಗುತ್ತಿದೆಯಾ ಎಂದು ಪ್ರಶ್ನಿಸಿದರು.
ಆಸ್ಪತ್ರೆಯಲ್ಲಿ ಮುಖ್ಯವಾಗಿ ಸ್ವಚ್ಛತೆ ಕಾಪಾಡಬೇಕಿದೆ, ಸ್ವಚ್ಛತೆಯಿಲ್ಲದೆ ಎಷ್ಟೇ ಚಿಕಿತ್ಸೆ ನೀಡಿದರೂ ಪ್ರಯೋಜನವಾಗುವುದಿಲ್ಲ, ಮೊದಲು ಶೌಚಗೃಹ ಸೇರಿ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆಯ ಬಗ್ಗೆ ಒತ್ತು ನೀಡಿ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಆಸ್ಪತ್ರೆಯಲ್ಲಿ ಔಷಧಗಳು ಸಮರ್ಪಕವಾಗಿ ಸರಬರಾಜು ಆಗುತ್ತಿರುವ ಬಗ್ಗೆ ವೈದ್ಯಾಧಿಕಾರಿಗಳಿಂದ ವಿವರ ಪಡೆದುಕೊಂಡು,ಅಗತ್ಯವಿರುವ ಔಷಧಗಳಿಗೆ ಮುಂಚಿತವಾಗಿಯೇ ಔಷಧ ಉಗ್ರಾಣದಿಂದ ತರಿಸಿಕೊಳ್ಳಿ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ರಕ್ತ ಪರೀೆಯ ಮತ್ತೊಂದು ಸಿಬಿಸಿ ಮಿಷನ್ ಬೇಕಿದೆ. ಜತೆಗೆ ಅನಸ್ತೇಶಿಯಾ ಮಿಷನ್ ಬೇಕಿದೆ ಎಂದು ವೈದ್ಯಾಧಿಕಾರಿ ಡಾ.ಲ್ಮಕಾಂತ ತಿಳಿಸಿದರು. ಸಭೆ ನಡೆಸಿ: ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ 15 ದಿನಕ್ಕೊಮ್ಮೆ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ರೋಗಿಗಳಿಗೆ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಬಾಣಂತಿ ಪ್ರಕರಣ: ಇತ್ತೀಚೆಗೆ ತಾಲೂಕಿನ ಪುಲಗಾನಹಳ್ಳಿ ಗ್ರಾಮದ ಬಾಣಂತಿ ಭಾಗ್ಯಮ್ಮ ಮೃತಪಟ್ಟಿರುವ ಬಗ್ಗೆ ನೀಡಿರುವ ಚಿಕಿತ್ಸೆಯ ಬಗ್ಗೆ ವಿವರಣೆಯನ್ನು ವೈದ್ಯಾಧಿಕಾರಿಗಳಿಗೆ ಕೇಳಿದರು. ವೈದ್ಯಾಧಿಕಾರಿಗಳು ಮರಣೋತ್ತರ ಪರೀೆಯ ವರದಿ ನಾಳೆ ನಮ್ಮ ಹಿರಿಯ ಅಧಿಕಾರಿಗಳ ಕೈ ಸೇರಲಿದೆ. ಇದರ ಜತೆಗೆ ಈ ಪ್ರಕರಣದ ಬಗ್ಗೆ ಡಿಎಚ್ಒ ಅವರು ವಿಶೇಷ ತನಿಖಾ ತಂಡ ರಚಿಸಿ ವರದಿಗೆ
ಆದೇಶಿಸಿದ್ದಾರೆ. ಇವೆರಡೂ ಬಂದ ಬಳಿಕ ಬಾಣಂತಿ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ವೈದ್ಯಾಧಿಕಾರಿ ತಿಳಿಸಿದರು.
ನಕಲಿ ಆಸ್ಪತ್ರೆಗಳು: ತಾಲೂಕಿನಲ್ಲಿ ನಕಲಿ ಆಸ್ಪತ್ರೆಗಳು ಹೆಚ್ಚಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಕ್ರಮಕ್ಕೆ ಸಂಬಂಧಪಟ್ಟ ಆರೋಗ್ಯ ಇಲಾಖೆಯ ವಿಶೇಷ ತಂಡ ಕ್ರಮಕ್ಕೆ ಮುಂದಾಗಿದೆ. ಭ್ರೂಣ ಹತ್ಯೆಯಂತಹ
ಪ್ರಕರಣಗಳು ಕಂಡು ಬಂದಲ್ಲಿ ಅಂತಹ ವೈದ್ಯರ, ಆಸ್ಪತ್ರೆಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಅವ್ಯವಸ್ಥೆಗಳು ಕಂಡು ಬಂದಲ್ಲಿ ರೋಗಿಗಳು ನಮಗೆ, ತಾಪಂ ಇಒಗೆ ದೂರು ನೀಡಿ, ದೂರು ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಜತೆಗೆ ಸಮಸ್ಯೆಗಳನ್ನು ಸರಿಪಡಿಸಲು ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
| ಡಾ.ನವೀನ್ಭಟ್ ಸಿಇಒ, ಚಿಕ್ಕಬಳ್ಳಾಪುರ