ಜ.17ರ ವರೆಗೆ ಮೈನ್ ಡೈಮಂಡ್ ಫೆಸ್ಟಿವಲ್

1414
Published on

ಬೆಳಗಾವಿ: ಆಭರಣಗಳ ವ್ಯಾಪಾರದಲ್ಲಿ ವಿಶ್ವಾದ್ಯಂತ ಖ್ಯಾತಿ ಪಡೆದಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಬೆಳಗಾವಿಯ ಶೋ ರೂಂನಲ್ಲಿ ‘ಮೈನ್ ಡೈಮಂಡ್ ಫೆಸ್ಟಿವಲ್’ ಆರಂಭಿಸಲಾಗಿದೆ. ಶನಿವಾರ ಆಯೋಜಿಸಿದ್ದ ಆಭರಣಗಳ ಪ್ರದರ್ಶನ ಮತ್ತು ಮಾರಾಟದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಲಲಿತಾ ಡಿ ಅಡೋನಿ, ನೀತು ಪಿ. ಕೊಸಂದಲ್, ರುಚಿ ನಂದನಿ ಅವರು ವಜ್ರದ ಆಭರಣ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು.

2021ರ ಜ.17ರವರೆಗೆ ನಡೆಯುವ ಈ ಉತ್ಸವವು ಆಭರಣ ಪ್ರಿಯರಿಗೆ ತಮ್ಮಿಷ್ಟದ ಆಭರಣ ಖರೀದಿಗೆ ಹೇಳಿಮಾಡಿಸಿ ದಂತಿದೆ. ಮಳಿಗೆಯಲ್ಲಿ ಜನಪ್ರಿಯ ವಿನ್ಯಾಸ, ಸಾಂಪ್ರದಾಯಿಕ ಆಭರಣಗಳ ಸಂಗ್ರಹವೇ ಇದ್ದು, ಪ್ರತಿ ಆಭರಣದ ಮೇಲೂ ಶೇ20 ರಷ್ಟು ವಿಶೇಷ ರಿಯಾಯಿತಿ ಘೋಷಿಸಲಾಗಿದ್ದು, ಖರೀದಿಗೆ ಗ್ರಾಹಕರು ಮುಗಿಬೀಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net