

ಮಂಗಳೂರು: ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಹಾಗೂ ಎಲ್ಲಾ ವಲಯಗಳ ಸಹಕಾರದೊಂದಿಗೆ ಇತ್ತೀಚೆಗೆ ಮಹಿಳಾ ದಿನಾಚರಣೆ ಆಚರಿಸಲಾಯಿತು. ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಕಥೊಲಿಕ್ ಸಭಾ ಕೇಂದ್ರದ ಆಧ್ಯಾತ್ಮಿಕ ನಿರ್ದೇಶಕರು ಹಾಗೂ ಬಿಜೈ ಚರ್ಚಿನ ಗುರು ಡಾ.ಜೆ.ಬಿ ಸಲ್ಡಾನ್ಹಾ ಪವಿತ್ರ ಪೂಜೆ ನೆರವೇರಿಸಿದರು.
ಕಥೊಲಿಕ್ ಸಭಾ ಕೇಂದ್ರಿಯ ಅಧ್ಯಕ್ಷ ಸ್ಟ್ಯಾನಿ ಲೋಬೊ ಅಧಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಹೆಣ್ಣು ಮಗುವಿಗೆ ಗಂಡು ಮಗುವಿನಂತೆಯೇ ಸಮಾನ ಗೌರವವನ್ನು ನೀಡಲು ಶ್ರಮಿಸಬೇಕು. ಪ್ರತಿ ಮಹಿಳೆಯ ಯಶಸ್ಸು ಇತರ ಮಹಿಳೆಗೆ ಸ್ಫೂರ್ತಿಯಾಗಬೇಕು. ಯುವಜನರನ್ನು ಅವರಿಗೆ ಆಸಕ್ತಿ ಇರುವ ಕ್ಷೇತ್ರಕ್ಕೆ ಪ್ರೇರೇಪಿಸಬೇಕು. ಸರ್ಕಾರದ ಮೂಲಕ ಆಧಾರಿತವಾದ ಸೇವೆಗಳಿಗೆ ಒತ್ತು ನೀಡಬೇಕು. ಸಮಾನತೆಯನ್ನು ಅಳವಡಿಸಿಕೊಂಡು ಮುನ್ನಡೆಯಿರಿ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ಬೆಥನಿ ಪ್ರೋವಿನ್ಶಿಯಲೇಟ್ ಪ್ರೊವಿನ್ಶಿಯಲ್ ಸುಪಿರಿಯರ್ ಸಿಸ್ಟರ್ ಸಿಸಿಲಿಯಾ ಮೆಂಡೊನ್ಸಾ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕ್ಯಾಸ್ತೆಲಿನೊ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಅಧ್ಯಕ್ಷ ಸ್ಟ್ಯಾನಿ ಲೋಬೊ, ಉಪಾಧ್ಯಕ್ಷ ವಿನೋದ್ ಪಿಂಟೊ ಸೇರಿದಂತೆ ಹಲವರು ಇದ್ದರು.
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಸ್ತ್ರೀ ಸಶಕ್ತೀಕರಣ ಸಂಚಾಲಕಿ ಲವೀನಾ ಪಿಂಟೊ ವಂದಿಸಿದರು. ಎಪಿಸ್ಕೋಪಲ್ ಸಿಟಿ ವಲಯದ ಮಾಜಿ ಅಧ್ಯಕ್ಷ ಪ್ಯಾಟ್ರಿಕ್ ಡಿಸೋಜ ನಿರೂಪಿಸಿದರು.