ಮಹಿಳಾ ಸಮ್ಮಾನ್ ದಿಂದ ಆರ್ಥಿಕ ಭದ್ರತೆ

ಕೊಟ್ಟೂರು ತಾಲೂಕು ಹರಾಳು ಗ್ರಾಮದಲ್ಲಿ ಮಂಗಳವಾರ ಮಹಿಳಾ ಸನ್ಮಾನ್ ಉಳಿತಾಯ ಖಾತೆ ತೆರಯುವ ಕಾರ್ಯಕ್ರಮದಲ್ಲಿ ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕ ವಿ.ಎಲ್. ಚಿತ್ಕೋಟಿ, ಕೂಡ್ಲಿಗಿ ಉಪ ವಿಭಾಗದ ಅಂಚೆ ನಿರೀಕ್ಷಕ ಬಾರಿಕರ ರಾಜಪ್ಪ, ಮುಖ್ಯ ಶಿಕ್ಷಕ ಈಶ್ವರಪ್ಪ ತುರುಕಾಣಿ, ಕೊಟ್ಟೂರು ಅಂಚೆ ಪಾಲಕ ರಾಜಶೇಖರ್ ಇದ್ದರು.

Published on

ಕೊಟ್ಟೂರು: ಮಹಿಳಾ ಸಮ್ಮಾನ್ ಉಳಿತಾಯ ಖಾತೆಗಳನ್ನು ತೆರೆಯುವ ಮೂಲಕ ಹರಾಳು ಗ್ರಾಮ ಸಂಪೂರ್ಣ ಮಹಿಳಾ ಸಮ್ಮಾನ್ ಗ್ರಾಮವಾಗಿದ್ದು, ಇಡೀ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಮುಂಚೂಣಿ ಸ್ಥಾನದಲ್ಲಿದೆ ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕ ವಿ.ಎಲ್. ಚಿತ್ಕೋಟಿ ಹೇಳಿದರು.

ಅಂಚೆ ಇಲಾಖೆಯಲ್ಲಿ ರಾಜ್ಯಕ್ಕೆ ಮಾದರಿ

ತಾಲೂಕಿನ ಹರಾಳು ಗ್ರಾಮದಲ್ಲಿ ಮಹಿಳಾ ಸಮ್ಮಾನ್ 190 ಉಳಿತಾಯ ಖಾತೆಯನ್ನು ತೆರೆಯುವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಮಹಿಳಾ ಸಮ್ಮಾನ್ ಗ್ರಾಮವಾಗಿರುವುದು ಇಲಾಖೆಗೆ ಹೆಮ್ಮೆ ತರಿಸಿದೆ. ಬಳ್ಳಾರಿ ವಿಭಾಗದಲ್ಲಿ ವಿಜಯನಗರ ಸೇರಿ 4,000 ಸಾವಿರ ಮಹಿಳಾ ಸಮ್ಮಾನ್ ಖಾತೆಗಳನ್ನು ತೆರೆಯಲಾಗಿದೆ. ಈ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೂಡ್ಲಿಗಿ ಉಪ ವಿಭಾಗದ ಅಂಚೆ ನಿರೀಕ್ಷಕ ಬಾರಿಕರ ರಾಜಪ್ಪ ಮಾತನಾಡಿದರು. ಮುಖ್ಯ ಶಿಕ್ಷಕ ಈಶ್ವರಪ್ಪ ತುರುಕಾಣಿ, ಬಳ್ಳಾರಿ ವಿಭಾಗದ ಅಂಚೆ ವಿಮೆಯ ಅಭಿವೃದ್ಧಿ ಅಧಿಕಾರಿ ಮಾರುತಿ, ಕೊಟ್ಟೂರು ಅಂಚೆ ಪಾಲಕ ರಾಜಶೇಖರ್, ಪ್ರಮುಖರಾದ ಕೆ. ವೆಂಕಟೇಶ, ಪೃಥ್ವಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net