ಮಹಿಳಾ ಮೋರ್ಚಾದಿಂದ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ

6-sanmna
Published on

ಕಡಬ: ಸುಳ್ಯ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ಮುರುಳ್ಯದಲ್ಲಿ ಲೀಲಾವತಿ ರಾಘವ ಗೌಡ ಮತ್ತು ಜಾನಕಿ ವೆಂಕಪ್ಪ ಗೌಡ ಅವರನ್ನು ಸನ್ಮಾನಿಸಲಾಯಿತು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ, ಜಿಲ್ಲಾ ಕಾರ್ಯಕಾರಿಣಿ ಮಾಜಿ ಸದಸ್ಯೆ ಪುಷ್ಪಾವತಿ ಬಾಳಿಲ, ಮುರುಳ್ಯ ಗ್ರಾಪಂ ಅಧ್ಯಕ್ಷೆ ವನಿತಾ ಸುವರ್ಣ, ಮುರುಳ್ಯ ಗ್ರಾಪಂ ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಎಡಮಂಗಲ ಗ್ರಾ.ಪಂ ಉಪಾಧ್ಯಕ್ಷೆ ದಿವ್ಯಾ ಯೋಗಾನಂದ, ಮಹಿಳಾ ಮೋರ್ಚಾ ಸದಸ್ಯೆ ಆಶಾ ರೈ ಕಲಾಯಿ, ಮುರುಳ್ಯ ಗ್ರಾಪಂ ಸದಸ್ಯೆ ಪುಷ್ಪಲತಾ, ಮಾಜಿ ಸದಸ್ಯೆ ಸುಧಾರಾಣಿ, ಕಾರ್ಯಕರ್ತರಾದ ನೀಲಾವತಿ ತೋಟ, ನಿರ್ಮಲ ಹನಿಗುಂದಿ, ಮನೆಯವರು ಉಪಸ್ಥಿತರಿದ್ದರು.

ಸೋಂಪಾಡಿ: ಸುಳ್ಯ ಮಂಡಲ ಸವಣೂರು ಮಹಾಶಕ್ತಿ ಕೇಂದ್ರದ ಸೋಂಪಾಡಿ ನಿವಾಸಿ ಶಿಕ್ಷಕಿ ಚಂದ್ರಕಲಾ ಅವರನ್ನು ಗೌರವಿಸಲಾಯಿತು. ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ, ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ,ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಜೀವಿ ಶೆಟ್ಟಿ, ಮಹಿಳಾ ಮೋರ್ಚಾ ಸದಸ್ಯೆ ಆಶಾ ರೈ ಕಲಾಯಿ, ಪಂಚಾಯಿತಿ ಸದಸ್ಯರಾದ ಚಂದ್ರಕಲಾ ಸುಣ್ಣಾಜೆ, ಪುಷ್ಪಾವತಿ ಕೇಕುಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net