

ಬಂಟ್ವಾಳ: ಕುಲಾಲ ಸಮುದಾಯದ ಸಂಘಟನೆಯಲ್ಲಿ ಕುಲಾಲ ಸೇವಾದಳದ ಪಾತ್ರ ಅಭೂತಪೂರ್ವವಾದುದು. ಕಳೆದ ಹಲವಾರು ವರ್ಷಗಳಿಂದ ಸಾಂಸ್ಕೃಕ ಕಾರ್ಯಕ್ರಮ ಮೂಲಕ ಸಂಘಟನೆಗಾಗಿ ಯಕ್ಷಗಾನ ಕಲಾವಿದರು, ರಂಗಕಲಾವಿದರು, ಯೋಧರನ್ನು ವಿವಿಧ ಕಾರ್ಯಕ್ರಮಗಳ ಆಯೋಜನೆಯಲ್ಲಿ ಒಂದು ಮಾಡಲಾಯಿತು. ಹಾಗೆಯೇ ಕಾರ್ಯಕ್ರಮಗಳಿಗೆಲ್ಲಾ ರುಚಿಯಾದ ಆಹಾರ ಖಾದ್ಯ ಮಾಡಿಕೊಡುವ ತಾಲೂಕಿನ ಕ್ಯಾಟರಿಂಗ್, ಹೋಟೆಲ್ ಮತ್ತು ಕ್ಯಾಂಟೀನ್ ಉದ್ಯಮಿಗಳನ್ನು ಒಂದುಗೂಡಿಸಿದ್ದು ಮುಂದೆಯೂ ಹೀಗೆಯೇ ವಿಭಿನ್ನ ರೀತಿ ಕಾರ್ಯಕ್ರಮ ಆಯೋಜಿಸುವಲ್ಲಿ ಯಶಸ್ವಿಯಾಗಲಿ ಎಂದು ಉದ್ಯಮಿ ನಾರಾಯಣ ಸಿ.ಪೆರ್ನೆ ತಿಳಿಸಿದರು.
ಬಿ.ಸಿ.ರೋಡಿನಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ಭಾನುವಾರ ಕೃಷ್ಣ ಕೃಷ್ಣ ಶ್ರೀಕೃಷ್ಣ-ಸೀಸನ್ 2 ಕಾರ್ಯಕ್ರಮ ಸಂದರ್ಭ ಅನ್ನದಾತ ಸುಖಿನೋಭವಂತುಃ ಹೋಟೆಲ್, ಕ್ಯಾಟರಿಂಗ್ ಮತ್ತು ಕ್ಯಾಂಟೀನ್ ಉದ್ಯಮಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆ ಕೃಷ್ಣಪ್ಪ ಬಿ.ವಹಿಸಿದ್ದರು. ಹೋಟೆಲ್ ಉದ್ಯಮಿ ಮೋಹನ್ ಕುಲಾಲ್, ವಗ್ಗ ಕೆಟರಿಂಗ್ ಉದ್ಯಮಿ ಸದಾಶಿವ ಬಂಗೇರ, ಉದ್ಯಮಿ ಚಂದ್ರಹಾಸ ಪಲ್ಲಿಪಾಡಿ, ನಿವೃತ್ತ ಯೋಧ ಚಂದಪ್ಪ ಮೂಲ್ಯ, ಕಟ್ಟಡ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ನಾವೂರು, ದಳಪತಿ ಗಣೇಶ್ ಕುಲಾಲ್ ಬೆದ್ರಗುಡ್ಡೆ, ಮಹಿಳಾ ಘಟಕ ಅಧ್ಯಕ್ಷೆ ಮಾಲತಿ ಮಚ್ಚೇಂದ್ರ ಭಾಗವಹಿಸಿದ್ದರು.
ಕೃಷ್ಣ ಕೃಷ್ಣ ಶ್ರೀಕೃಷ್ಣಾ-ಸೀಸನ್ 2 ವಿವಿಧ ವಿಭಾಗಗಳಲ್ಲಿ ಕೃಷ್ಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಆವೆ ಮಣ್ಣಿನಲ್ಲಿ ಆಕೃತಿ ರಚನಾ ಸ್ಪರ್ಧೆ ನಡೆಯಿತು. ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಕವಿತಾ ಯಾದವ್ ಉಪನ್ಯಾಸ ನೀಡಿದರು.
ಜಯಂತ್ ಅಗ್ರಬೈಲು, ತಾರನಾಥ ಮೊಡಂಕಾಪು, ಮಹೇಶ್ ಕುಲಾಲ್ ಕಡೇಶಿವಾಲಯ, ಸುಕನ್ಯಾ ನಿರೂಪಿಸಿದರು. ಮಿಥ್ವಿ ಜಿ. ಮೂಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಕುಮಾರ್ ರಾಯಿ ಸ್ವಾಗತಿಸಿದರು. ಪ್ರೇಮನಾಥ ನೇರಂಬೋಳು ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ರೋಹಿತ್ ಮೊಡಂಕಾಪು ವಂದಿಸಿದರು. ಚಂದ್ರಶೇಖರ ಕಾಮಾಜೆ, ರಾಘವೇಂದ್ರ ಕಾಮಾಜೆ, ರಾಜೇಶ್ ಭಂಡಾರಿಬೆಟ್ಟು, ದೇವದಾಸ ಅಗ್ರಬೈಲು, ದರ್ಶನ್ ಮೊಡಂಕಾಪು, ಕೃತಿಕ್ ಬಂಟ್ವಾಳ, ಗಣೇಶ್ ಮೊಡಂಕಾಪು, ವಿಜಿತ್ ಬಂಟ್ವಾಳ, ಯಾದವ ಅಗ್ರಬೈಲು, ಚಿರಾಗ್ ಕಾಮಾಜೆ ಸಹಕರಿಸಿದರು.