25ರಿಂದ ಮಹಾಶಿವರಾತ್ರಿ, ಮಾ.27ರಿಂದ ಯುಗಾದಿ ಜಾತ್ರೆ

Published on

ಹನೂರು: ತಾಲೂಕಿನ ಶ್ರೀಮಲೆಮಹದೇಶ್ವರ ಬೆಟ್ಟದಲ್ಲಿ ಫೆ.25ರಿಂದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ಮಾ. 27ರಿಂದ ಯುಗಾದಿ ಜಾತ್ರಾ ಮಹೋತ್ಸವದ ಆರಂಭವಾಗಲಿದ್ದು, ಇದರ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ.

25 ರಂದು ಮಹಾಶಿವರಾತ್ರಿ ಜಾತ್ರೆ ಪ್ರಾರಂಭವಾಗಲಿದೆ. 26ರಂದು ಎಣ್ಣೆಮಜ್ಜನ, ಜಾಗರಣೆ ಉತ್ಸವ, 27ರಂದು ವಿಶೇಷ ಸೇವೆ ಉತ್ಸವಾದಿಗಳು, 28ರಂದು ಅಮಾವಾಸ್ಯೆ, ವಿಶೇಷ ಸೇವೆ ಉತ್ಸವಾದಿಗಳು ಹಾಗೂ ಮಾರ್ಚ್ 1 ರಂದು ಬೆಳಗ್ಗೆ 8.10 ರಿಂದ 8.45 ಗಂಟೆಯವರೆಗೆ ಮಹಾಶಿವರಾತ್ರಿ ಮಹಾರಥೋತ್ಸವ ಪ್ರಾರಂಭವಾಗಲಿದ್ದು, ರಾತ್ರಿ ಅಭಿಷೇಕ ಪೂಜೆ ಮುಗಿದ ನಂತರ ಕೊಂಡೋತ್ಸವ ಜರುಗಲಿದೆ.

ಮಾ.27 ರಂದು ಯುಗಾದಿ ಜಾತ್ರೆ ಪ್ರಾರಂಭವಾಗಲಿದೆ. 28ರಂದು ಎಣ್ಣೆ ಮಜ್ಜನ, ವಿಶೇಷ ಸೇವೆ ಉತ್ಸವಾದಿಗಳು, 29ರಂದು ಅಮಾವಾಸ್ಯೆ, ವಿಶೇಷ ಸೇವೆ ಉತ್ಸವಾದಿಗಳು ಹಾಗೂ 30ರಂದು ಬೆಳಿಗ್ಗೆ 8 ರಿಂದ 9 ಗಂಟೆಯವರೆಗೆ ಚಂದ್ರಮಾನ ಯುಗಾದಿ ಮಹಾರಥೋತ್ಸವ ಪ್ರಾರಂಭವಾಗಲಿದೆ ಎಂದು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net