ಧರ್ಮತ್ತಡ್ಕದಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ

Published on

ಕುಂಬಳೆ: ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಮಂಗಳವಾರ ಶಾಲಾ ಸಭಾಂಗಣದಲ್ಲಿ ಜರಗಿತು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಅಧ್ಯಕ್ಷತೆ ಶೆಟ್ಟಿ ಕುಡಾಲು ವಹಿಸಿದರು. ಮುಖ್ಯ ಶಿಕ್ಷಕ ಇ.ಎಚ್ ಗೋವಿಂದ ಭಟ್ ಮಾತನಾಡಿದರು. ಶಾಲಾ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್, ಪ್ರಾಂಶುಪಾಲ ರಾಮಚಂದ್ರ ಭಟ್ ಎನ್, ಗಣಿತ ವಿಭಾಗ ಮುಖ್ಯಸ್ಥ ಶಶಿಕುಮಾರ್ ಪಿ, ರಕ್ಷಿತ್ ಕುಮಾರ್ ಎಂ ಶುಭ ನುಡಿಗಳನ್ನಾಡಿದರು. ಶ್ವೇತಾ ಕುಮಾರಿ ಎಂ. ಹಿಂದಿನ ವರ್ಷದ ವಾರ್ಷಿಕ ವರದಿ ವಾಚಿಸಿದರು.

ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ರೂಪಿಸಲಾಯಿತು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಶಾಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ ಹೆತ್ತವರ ಸಲಹೆ ಸೂಚನೆ ಸ್ವೀಕರಿಸಲಾಯಿತು. ಸುನಿತಾ ಸ್ವಾಗತಿಸಿ, ಉಮಾದೇವಿ ವಂದಿಸಿದರು. ಶಶಿಧರ ಕೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net