ಸ್ವ-ಉದ್ಯೋಗದಿಂದ ಆದಾಯ ಹೆಚ್ಚಳ : ಕಾರ್ಯಾಗಾರದಲ್ಲಿ ಹಮೀದ್ ಪೊಸೊಳಿಗೆ ಅನಿಸಿಕೆ

Bdk_Detergent
Published on

ಮುಳ್ಳೇರಿಯ: ಉತ್ತಮ ಗುಣಮಟ್ಟದ ಡಿಟರ್ಜಂಟ್ ಕಡಿಮೆ ವೆಚ್ಚದಲ್ಲಿ ತಯಾರಿಸಿ ಮವ್ವಾರು ಶಾಲೆ ವಿದ್ಯಾರ್ಥಿಗಳು ಹಾಗೂ ಮಾತೃ ಸಮಿತಿ ಸದಸ್ಯರು ಗಮನ ಸೆಳೆದಿದ್ದಾರೆ.

ಬಟ್ಟೆ, ಪಾತ್ರೆ, ನೆಲ ಒರೆಸಲು, ಟಾಯ್ಲೆಟ್ ಕ್ಲೀನರ್, ಫಿನಾಯಿಲ್‌ಗಳನ್ನು ಶಾಲೆಯಲ್ಲೇ ತಯಾರಿಸಲಾಗಿದೆ. ಕಾರ್ಯಾಗಾರ ಕುಂಬ್ಡಾಜೆ ಗ್ರಾಪಂ ಅಧ್ಯಕ್ಷ ಹಮೀದ್ ಪೊಸೊಳಿಗೆ ಉದ್ಘಾಟಿಸಿ ಮಾತನಾಡಿ, ಪ್ರತಿ ಮಹಿಳೆಯೂ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಪೂರಕವಾಗಿ ಶಾಲೆಯಲ್ಲಿ ಎಲ್ಲರೂ ಒಂದುಗೂಡಿ ಉತ್ತಮ ಕಾರ್ಯಕ್ಕೆ ತೊಡಗಿರುವುದು ಶ್ಲಾಘನೀಯ ಎಂದರು.

ಗ್ರಾಪಂ ಸದಸ್ಯೆ ಸುನಿತಾ ಜೆ.ರೈ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ವಿಶ್ವನಾಥನ್ ಬಳ್ಳಪದವು, ಮುಖ್ಯಶಿಕ್ಷಕಿ ಶ್ರೀಜ ಪಿ.ವಿ., ಮಾತೃ ಸಮಿತಿ ಅಧ್ಯಕ್ಷೆ ಬೀಫಾತಿಮ್ಮ, ಸಿಡಿಎಸ್ ಚೇರ್‌ಪರ್ಸನ್ ರೋಶಿನಿ ಶುಭಾಶಂಸನೆಗೈದರು. ಸ್ವದೇಶಿ ಗ್ರೂಪ್ ಕಾರ್ಯದರ್ಶಿ ಸತ್ಯನಾರಾಯಣ ಮಾಸ್ತರ್ ಡಿಟರ್ಜಂಟ್ ಕಾರ್ಯಾಗಾರದ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net