ರಾಘವೇಂದ್ರ ಮಠದಲ್ಲಿ ಮಹಾರಥೋತ್ಸವ

12-08-25--krs1
ಕೃಷ್ಣರಾಜಸಾಗರದ ರೈಲ್ವೇ ನಿಲ್ದಾಣ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ಮುಖ್ಯಅರ್ಚಕರಾದ ರಾಘವೇಂದ್ರಾಚಾರ್ ನೇತೃತ್ವದಲ್ಲಿ ರಾಯರ 354ನೇ ಉತ್ತರಾರಾಧನೆ ಪ್ರಯುಕ್ತ ಮಹಾರಥೋತ್ಸವ ನಡೆಯಿತು.
Published on

ಕೆ.ಆರ್.ಸಾಗರ: ಕೃಷ್ಣರಾಜಸಾಗರದ ರೈಲ್ವೇ ನಿಲ್ದಾಣ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ರಾಯರ 354ನೇ ಉತ್ತರಾರಾಧನೆ ಪ್ರಯುಕ್ತ ಮಂಗಳವಾರ ಪಲ್ಲಕ್ಕಿ ಉತ್ಸವ ಹಾಗೂ ಮಹಾರಥೋತ್ಸವ ನಡೆಯಿತು.

ಮುಖ್ಯಅರ್ಚಕ ಶ್ರೀ ರಾಘವೇಂದ್ರಾಚಾರ್ ನೇತೃತ್ವದಲ್ಲಿ ಬೆಳಗ್ಗೆ ಸುಪ್ರಭಾತ ಸೇವೆಯೊಂದಿಗೆ ದೈನಂದಿನ ಕಾರ್ಯಕ್ರಮಗಳ ಜತೆ ವಿಶೇಷವಾಗಿ ರಾಯರ ಪ್ರತಿಮೆಗೆ ಪಂಚಾಮೃತ ಅಭಿಷೇಕ ಮಾಡಿ ನಂತರ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.

ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ಸವ ಮೂರ್ತಿಯನ್ನು ವಿವಿಧ ಹೂಗಳಿಂದ ಅಲಕೃಂತವಾದ ರಥದಲ್ಲಿರಿಸಿ ಅಲಂಕರಿಸಿ, ನೂರಾರು ಭಕ್ತರ ಸಮ್ಮುಖದಲ್ಲಿ ಕೃಷ್ಣರಾಜಸಾಗರ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರು ರಾಘವೇಂದ್ರ ಸ್ವಾಮಿಗಳಿಗೆ ಜಯಘೋಷ ಕೂಗಿದರು. ಹಲವರು ಪೂಜೆ ಸಲ್ಲಿಸಿದರು. ರಥ ಮಠದ ಮುಂಭಾಗಕ್ಕೆ ಬಂದು ನಿಂತಾಗ ಮಂಗಳಾರತಿ ಮಾಡಲಾಯಿತು.

ನಂತರ ರಾಯರ ಪ್ರತಿಮೆಯ ಪಲ್ಲಕ್ಕಿ ಉತ್ಸವ ಮಠದ ಆವರಣದಲ್ಲೇ ರಾಯರ ಕೀರ್ತನೆ, ಭಜನೆ ಸಮೇತ ಮಹಾಮಂಗಳಾರತಿ ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು. ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ನೂರಾರು ಭಕ್ತರು ಉಪಸ್ಥಿತರಿದ್ದರು. ಅರ್ಚಕರಾದ ಸುರೇಂದ್ರಾಚಾರ್, ವಿಜೇಂದ್ರಾಚಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net