

ಬ್ರಹ್ಮಾವರ: ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆ.14ರಿಂದ ಮೊದಲ್ಗೊಂಡು 20ರವರೆಗೆ ಅಷ್ಟಬಂಧ- ಬ್ರಹ್ಮಕಲಶೋತ್ಸವ, ಹಾಲು ಹಬ್ಬ, ವಾರ್ಷಿಕ ಪೂಜೆ, ಗೆಂಡಸೇವೆ ಅಂಗವಾಗಿ ಶುಕ್ರವಾರ ಸಾಮೂಹಿಕ ಪ್ರಾರ್ಥನೆಯೊಂದಿಗೆ ಗಣಪತಿ ಯಾಗ, ನವಗ್ರಹಯಾಗ, ಮಹಾ ಮೃತುಂಜಯ ಯಾಗ, ಭಾಗ್ಯ ಸೂಕ್ತ ಹೋಮ ನಡೆಯಿತು.
ರಮೇಶ್ ಭಟ್ ಪ್ರಧಾನ ನೇತೃತ್ವದಲ್ಲಿ ದೇವಸ್ಥಾನ ಆಡಳಿತ ಮೊಕ್ತೇಸರ ಡಾ.ಜಯರಾಮ ಶೆಟ್ಟಿಗಾರ್ ಮತ್ತು ಕವಿತಾ ಶೆಟ್ಟಿಗಾರ್ ಸಂಕಲ್ಪ ಪೂಜೆ ಜರುಗಿತು. ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಶ್ರೀ ನಿವಾಸ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಚ್.ಎ.ಗೋಪಾಲ್ ಮತ್ತು ಉಪಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.