ಮಹಾಮಸ್ತಕಾಭಿಷೇಕ ಮಹೋತ್ಸವದ ಶ್ರೀಮುಖ ಪತ್ರಿಕೆ ಬಿಡುಗಡೆ

01 SBG-5 Venuru Mastakabhisheka (2)
ವೇಣೂರು ಮಹಾಮಸ್ತಕಾಭಿಷೇಕ ಮಹೋತ್ಸವ-2024ರ ಶ್ರೀಮುಖ ಪತ್ರಿಕೆಯನ್ನು ಶ್ರವಣಬೆಳಗೊಳದಲ್ಲಿ ತ್ಯಾಗಿಗಳು ಹಾಗೂ ಪೂಜ್ಯ ಭಟ್ಟಾರಕ ಶ್ರೀಗಳು ಸೋಮವಾರ ಅನಾವರಣಗೊಳಿಸಿದರು.
Published on

ಶ್ರವಣಬೆಳಗೊಳ: ದಕ್ಷಿಣ ಕನ್ನಡ ಜಿಲ್ಲೆ ವೇಣೂರಿನಲ್ಲಿ 2024ರ ಫೆ. 22 ರಿಂದ ಮಾ. 1ರವರೆಗೆ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಶ್ರೀಮುಖ ಪತ್ರಿಕೆಯನ್ನು ಶ್ರವಣಬೆಳಗೊಳದಲ್ಲಿ ಚಾತುರ್ಮಾಸ ನಿರತ ತ್ಯಾಗಿಗಳು ಹಾಗೂ ಭಟ್ಟಾರಕ ಸ್ವಾಮೀಜಿ ಸೋಮವಾರ ಬಿಡುಗಡೆಗೊಳಿಸಿದರು.

ಮುನಿಶ್ರೀ ಪಾವನಕೀರ್ತಿ ಮಹಾರಾಜರು, ಮುನಿಶ್ರೀ ಅಮೋಘಕೀರ್ತಿ ಮಹಾರಾಜರು, ಮುನಿಶ್ರೀ ಅಮರಕೀರ್ತಿ ಮಹಾರಾಜರು, ಮುನಿಶ್ರೀ ಆದಿಸಾಗರ ಮಹಾರಾಜರು, ಮುನಿಶ್ರೀ ನಿರ್ದೂಷಸಾಗರ ಮಹಾರಾಜರು ಮತ್ತು ಸಮಸ್ತ ಮಾತಾಜಿ ಅವರು, ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ತಮಿಳುನಾಡಿನ ಅರಹಂತಗಿರಿ ಜೈನ ಮಠದ ಸ್ವಸ್ತಿಶ್ರೀ ಧವಲಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಮೈಸೂರು ಜಿಲ್ಲೆಯ ಕನಕಗಿರಿ ಜೈನ ಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅವರನ್ನು ಭಕ್ತಿಪೂರ್ವಕವಾಗಿ ಆಮಂತ್ರಿಸಲಾಯಿತು.

ವೇಣೂರು ಭಗವಾನ್ ಶ್ರೀ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ-2024 ಹಾಗೂ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯಾಧ್ಯಕ್ಷ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net